೫೧ ಸಾವಿರ ರೂ. ಕಳೆದುಕೊಂಡ ಯುವತಿ

Mobile Game
Published on

ಉಡುಪಿ: ಬ್ಯಾಂಕ್ ಖಾತೆ ವಿವರಗಳನ್ನು ಹ್ಯಾಕ್ ಮಾಡುವ ಆ್ಯಪ್‌ನ್ನು ಮೊಬೈಲ್‌ಗೆ ಇನ್ಸ್ಟಾಲ್ ಮಾಡಿಸಿ ಹಣವನ್ನು ದೋಚಿದ ಘಟನೆ ನಡೆದಿದೆ. ಮಣಿಪಾಲ, ವಿದ್ಯಾರತ್ನ ನಗರ ನಿವಾಸಿ ಮೇಘಾ.ಜೆ ಪಾಂಡ್ಯ ವಂಚನೆಗೊಳಗಾದ ಯುವತಿ. ಗೂಗಲ್ ಪೇ ಅಕೌಂಟ್ ಡಿಆಕ್ಟಿವ್ ಆಗಿರುವ ಬಗ್ಗೆ ಕಸ್ಟಮರ್‌ಕೇರ್ ಒಂದಕ್ಕೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಇನ್ನೊಂದು ನಂಬರ್‌ನಿಂದ ಕರೆ ಮಾಡುವುದಾಗಿ ತಿಳಿಸಿ ಪೇಟಿಎಂ ಕೆವೈಸಿ ನಂಬರ್‌ನಿಂದ ಮಾತನಾಡಲಾಗುತ್ತಿದೆ.

ನೀವು ಕ್ವಿಕ್ ಸಪೋರ್ಟ್ ಎಂಬ ಆಪ್‌ನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಯುವತಿ ಆಪ್ ಡೌನ್‌ಲೋಡ್ ಮಾಡಿಕೊಂಡು ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ಯುವತಿಯ ಆಂಧ್ರ ಬ್ಯಾಂಕ್, ಚೆನ್ನೈ ಶಾಖೆಯ ಎಸ್.ಬಿ ಖಾತೆಯಿಂದ ೩ ಬಾರಿ ಕ್ರಮವಾಗಿ ೫೧,೮೯೧ ರೂ., ಹಣವನ್ನು ಆನ್ಲೈನ್ ವರ್ಗಾವಣೆ ಮಾಡಿಕೊಂಡು ಯುವತಿಗೆ ವಂಚಿಸಲಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net