

ಉಡುಪಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಆನ್‌ಲೈನ್‌ನಲ್ಲಿ ಹುಡುಕಾಡುತ್ತಿದ್ದಾಗ ಸಿಕ್ಕಿದ ದೂರವಾಣಿ ಸಂಖ್ಯೆ ಕರೆ ಮಾಡಿ ಉಡುಪಿ ವ್ಯಕ್ತಿಯೊಬ್ಬರು 69439 ರೂ. ಹಣ ಕಳೆದುಕೊಂಡಿದ್ದಾರೆ.
ರಾಜೇಶ್ ಅಮೀನ್ ಎಂಬುವವರು ಓಲಾ ಕಂಪೆನಿಯ ನಕಲಿ ವೆಬ್‌ಸೈಟ್ ಬಗ್ಗೆ ತಿಳಿಯದೆ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆ ಸಂಖ್ಯೆ ನೀಡಿ ಮುಂಗಡ ಹಣ ಪಾವತಿಸುವಂತೆ ಸೂಚಿಸಿದ್ದ. ಇದನ್ನು ನಂಬಿದ ರಾಜೇಶ್ ಅವರು, ಸ್ಕೂಟರ್ ಖರೀದಿಸಲು 30,000, 38,940 ಮತ್ತು 499 ರೂಪಾಯಿ ಹಣವನ್ನು ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿದ್ದರು. ನಂತರ ಇವರಿಗೆ ಮೋಸ ಹೋಗಿರುವುದು ಅರಿವಿಗೆ ಬಂದಿದ್ದು, ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.