

ಬೆಳಗಾವಿ : ಆನಲೈನ್ ಲಿಂಕ್ ಮೂಲಕ ನೀಡಿದ್ದ ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚಿನ ಲಾಭಾಂಶ ಕೊಡುತ್ತೇವೆಂದು ನಂಬಿಸಿದ ವಂಚಕರು ಬೆಳಗಾವಿಯ ಇಂಜಿನಿಯರ್ ಒಬ್ಬರಿಗೆ ಒಂದೇ ದಿನದಲ್ಲಿ ಬರೊಬ್ಬರಿ 15 ಲಕ್ಷ ರೂ.ವಂಚಿಸಿದ್ದಾರೆ.
ಇಲ್ಲಿನ ಚಿದಂಬರ ನಗರದ ಸುಕೃತಾ ಕುಲಕರ್ಣಿ ವಂಚನೆಗೊಳಗಾಗಿರುವರು. ವಂಚನೆ ಕುರಿತು ನಗರದಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.
ಮೇ.3ರಂದು 7318017603 ಸಂಖ್ಯೆಯಿಂದ ವಾಟ್ಸಾೃಪ್ ಮೂಲಕ ಮೆಸೆಜ್ ಮಾಡಿ, ಲಿಂಕ್‌ಮೂಲಕ ಕೊಡುವ ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿದ್ದಾರೆ. ಮೊದಲು ಟಾಸ್ಕ್ ಎಂದು 5 ಸಾವಿರ ರೂ.ಯುಪಿಐ ಮೂಲಕ ಹಣ ಜಮೆ ಮಾಡಿಸಿಕೊಂಡು ಟಾಸ್ಕ್ ಕೊಟ್ಟಿದ್ದಾರೆ. ಅದನ್ನು ಪೂರ್ಣಗೊಳಿಸಿದ್ದೀರಿ ಎಂದು ವಾಪಸ್ 7 ಸಾವಿರ ರೂ.ಹಣ ವಾಪಸ್ ಹಾಕಿ, ಹೊಸ-ಹೊಸ ಟಾಸ್ಕ್ ನೀಡಿದ್ದಾರೆ. ಹೀಗೆ ಮೇ.4 ರವರೆಗೆ ಹಂತಹಂತವಾಗಿ 15 ಲಕ್ಷ ರೂ.ಹಣವನ್ನು ಯುಪಿಐ, ಎಸ್ ಬ್ಯಾಂಕ್ ಖಾತೆ ಹಾಗೂ ಪಂಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಇಂಜಿನಿಯರ್ ಸುಕೃತಾ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.