

ಕಾಸರಗೋಡು: ಆನ್‌ಲೈನ್ ಮೂಲಕ ಷೇರು ಮಾರ್ಕೆಟ್ ಟ್ರೇಡಿಂಗ್‌ಗೆ ಹಣ ಹೂಡಿಕೆ ಮಾಡಿಸಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಡ್ಯಾನಿ ಲಿಪೋಲಿ ಹಾಗೂ ಆಮಿಲಿಯಾ ಎಂಬುವರ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೀರ್ಚಾಲು ಸನಿಹದ ಕುಂಟಿಕಾನ ಪಾಡಲಡ್ಕ ನಿವಾಸಿಲಿಯೋ ಜೋಸ್ ಎಂಬುವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಆನ್‌ಲೈನ್ ಷೇರು ಮಾರ್ಕೆಟ್ ಟ್ರೇಡಿಂಗ್ ಹೆಸರಲ್ಲಿ ಜುಲೈ 17ರಿಂದ 30ರ ಕಾಲಾವಧಿಯಲ್ಲಿ 2.50 ಲಕ್ಷ ರೂ. ಪಡೆದು, ಲಾಭಾಂಶವಾಗಲಿ, ಪಡೆದ ಹಣವನ್ನಾಗಲೀ ವಾಪಾಸು ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.