ಆನ್‌ಲೈನ್ ಪಠ್ಯಕ್ರಮಕ್ಕೆ ಒತ್ತಡ ಬೇಡ

21 Jaggu 5-Web
Published on

ಬೆಳಗಾವಿ: ಆನ್‌ಲೈನ್ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ವಿಶ್ವವಿದ್ಯಾಲಯ ಒತ್ತಡ ಹಾಕಬಾರದು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ನೆಟ್‌ವರ್ಕ್ ಇರುವುದಿಲ್ಲ. ಹೀಗಾಗಿ ಈ ಭಾಗದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಸೂಕ್ತ ರೀತಿ ಅವಕಾಶ ಮಾಡಿಕೊಡಬೇಕು. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನಿರ್ಣಯ ತೆಗೆದುಕೊಳ್ಳಬೇಕು. ಆನ್‌ಲೈನ್ ತರಗತಿ ನಡೆಸಿದರೂ ಲಾಕ್‌ಡೌನ್ ಬಳಿಕ 20ರಿಂದ 25 ದಿನ ಪಠ್ಯವನ್ನು ಪುನರಾವರ್ತನೆ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಡಾ. ವೀರೇಶ ಬಾಳಿಕಾಯಿ, ಡಾ. ಆನಂದ ಹೊಸೂರು, ರೋಹಿತ್ ಹುಮನಾಬಾದಿಮಠ, ಕಿರಣ ತುಕಾಂದರ, ಆಶ್ವಿನ್ ಹುಮನಾಬಾದಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net