ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಕ್ರಮಜರುಗಿಸಿ

24 DEVDURGA 02
ದೇವದುರ್ಗ ಉಪತಹಸೀಲ್ದಾರ್ ವೆಂಕಟೇಶಗೆ ನಮ್ಮ ಕರ್ನಾಟಕ ಸೇನೆ ಮನವಿ ಸಲ್ಲಿಸಿತು. ರಾಜ್ಯ ಸಂಚಾಲಕ ಎಂ.ಎಸ್.ವೆಂಕಟೇಶ, ತಾಲೂಕು ಅಧ್ಯಕ್ಷ ಭೀಮನಗೌಡ ಎಂ.ಪಾಟೀಲ್, ಹನುಂತ್ರಾಯಗೌಡ ಗಣಜಲಿ, ರಂಗಪ್ಪ ನಾಯಕ, ಹುಸೇನ್ ಬಾಷಾ, ಸಿದ್ದು ಮರಾಠ, ಚನ್ನಪ್ಪ ಗಲಗ ಇತರರಿದ್ದರು.
Published on

ದೇವದುರ್ಗ: ಆನ್‌ಲೈನ್ ಮನರಂಜನೆ ಹಾಗೂ ಬೆಟ್ಟಿಂಗ್ ಗೇಮ್‌ಗಳಿಂದ ಯುವಜನತೆ ಹಾಳಾಗುತ್ತಿದ್ದು, ಸರ್ಕಾರ ಎಚ್ಚೆತ್ತು ಕೊಂಡು ಆನ್‌ಲೈನ್ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧ ಮಾಡುವಂತೆ ಒತ್ತಾಯಿಸಿ ಮಿನಿವಿಧಾನಸೌಧದಲ್ಲಿ ಉಪ ತಹಸೀಲ್ದಾರ್ ವೆಂಕಟೇಶಗೆ ನಮ್ಮ ಕರ್ನಾಟಕ ಸೇನೆ ಬುಧವಾರ ಮನವಿ ಸಲ್ಲಿಸಿತು.

ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮ್‌ಗಳಿಂದ ಯುವಜನತೆ ಹಾಳಾಗುತ್ತಿದ್ದು ಮೊಬೈಲ್ ಹಾಗೂ ಚಟಗಳ ದಾಸರಾಗಿ ಸಾಲಗಾರರಾಗುತ್ತಿದ್ದಾರೆ. ಆನ್‌ಲೈನ್ ಗೇಮ್ ಚಟವಾಗಿ ಬೆಳೆಯುತ್ತಿದ್ದು ಮಕ್ಕಳಿಂದ ಹಿಡಿದು ವಯಸ್ಕರ ಹಾದಿಯಾಗಿ ಹಿರಿಯ ನಾಗರಿಕರು ದಾಸರಾಗುತ್ತಿದ್ದಾರೆ. ಗೇಮ್‌ನಲ್ಲಿ ಹಣಕಳೆದುಕೊಂಡವರು ಆತ್ಮಹತ್ಯೆಗೆ ಶರಣಾಗುವ, ಊರು ಬಿಟ್ಟು ಓಡಿಹೋದ ಉದಾಹರಣೆಗಳಿವೆ. ಬಹಿರಂಗವಾಗಿ ಜೂಜಾಟ ದಂಧೆ ನಿಲ್ಲಿಸಲು ಆಗುತ್ತಿಲ್ಲ. ಇನ್ನು ಆನ್‌ಲೈನ್ ದಂಧೆ ನಿಲ್ಲಿಸುವುದು ಕಷ್ಟ. ಆದರೂ ಸರ್ಕಾರ ಇವುಗಳ ಮೇಲೆ ನಿಷೇಧ ಹೇರದೆ ಇರುವುದು ಖಂಡನೀಯ.

ಯುವಜನತೆಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ಕೊಡಬೇಕು. ತಾಲೂಕು ಸೇರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮಟ್ಕಾ, ಇಸ್ಪೀಟ್ ಜೂಜಾಟ ತಕ್ಷಣವೇ ನಿಲ್ಲಿಸಬೇಕು. ಇದರಲ್ಲಿ ಭಾಗಿಯಾದ ದೊಡ್ಡದೊಡ್ಡ ಕುಳಗಳ ಬಗ್ಗೆ ತನಿಖೆ ನಡೆಸಿ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಶಿವನಗೌಡ ಪಾವರ್ತಿ, ದೇವೇಂದ್ರಪ್ಪ ತಾತ, ರಂಗನಾಥ ಗಾಣಧಾಳ, ರಾಯಪ್ಪ ವಂದಲಿ, ಮಹಮ್ಮದ್ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net