ವ್ಯಾಪಾರಸ್ಥರ ಸಂಘದಿಂದ ಸನ್ಮಾನ

IMG_20240806_202937_902.jpg
Published on

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಉಳ್ಳಾಗಡ್ಡಿ-ಆಲೂಗಡ್ಡಿ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಲೀಂ ಬ್ಯಾಹಟ್ಟಿ ಅವರನ್ನು ವ್ಯಾಪಾರಸ್ಥರ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ ಅವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಗಂಗನಗೌಡ ಪಾಟೀಲ, ಸದಸ್ಯರಾದ ಗುಂಡಪ್ಪ ಸಾವುಕಾರ, ವಿನೋದ ತಲ್ಲೂರ, ಶಂಕರಗೌಡ ಸೋಮನಗೌಡ್ರ, ಬಸವರಾಜ ಅಕ್ಕಿ, ಅಪ್ಪಾಜಿ ಬತ್ಲಿ, ಕಪನಳ್ಳಿ, ಜೋಗೂರ, ಶಿವರಾಜ ರಾಯರ, ಸಂತೋಷ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net