ಈರುಳ್ಳಿ-ಮೆಕ್ಕೆಜೋಳ ನಷ್ಟ ಪರಿಹಾರ ನೀಡಿ

25-atbr-hdl-02
ಹೂವಿನಹಡಗಲಿ ತಹಸಿಲ್ ಕಚೇರಿ ಮುಂದೆ ಈರುಳ್ಳಿ ಬೆಳೆಗಾರರ ಸಂಘ ಪ್ರತಿಭಟನೆ ನಡೆಸಿತು.ಸಂಘದ ರಾಜ್ಯಾಧ್ಯಕ್ಷ ಎನ್.ಎಂ.ಸಿದ್ದೇಶ, ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಯಶೋದಾ, ಶರಣಪ್ಪ, ನಾಗಮ್ಮ, ಕೊಟ್ರವ್ವ, ಆಶಾಬಾಯಿ ಇತರರಿದ್ದರು.
Published on

ಹೂವಿನಹಡಗಲಿ: ಬೆಳೆ ಹಾನಿ ಪರಿಹಾರ ವಿತರಣೆ ಹಾಗೂ ಈರುಳ್ಳಿ ಬೆಳೆಗಾರರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ತಹಸಿಲ್ ಕಚೇರಿ ಮುಂದೆ ಈರುಳ್ಳಿ ಬೆಳೆಗಾರರ ಸಂಘ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಸಂತೋಷ್‌ಕುಮಾರ್ ಮನವಿ ಸಲ್ಲಿಸಿತು.

ಸಂಘದ ರಾಜ್ಯಾಧ್ಯಕ್ಷ ಎನ್.ಎಂ.ಸಿದ್ದೇಶ್ ಮಾತನಾಡಿ, ಈರುಳ್ಳಿ ಬೆಳೆದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ನಿರಂತರ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರಿಗೆ ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರ ಪರಿಹಾರ ಒದಿಗಿಸಬೇಕು. ಎಕರೆಗೆ 60 ರಿಂದ 70 ಸಾವಿರ ರೂ.ವರೆಗೆ ಖರ್ಚು ಆಗಿದೆ. ಆದರೆ, ಈಗ 10 ಸಾವಿರ ರೂ. ದೊರಕುತ್ತಿಲ್ಲ. ಈರುಳ್ಳಿಯೊಂದಿಗೆ ಮೆಕ್ಕೆಜೋಳ ಬೆಳೆಗೂ ಪರಿಹಾರ ನೀಡಿ ಎಂದು ಒತ್ತಾಯಿಸಿದರು.

ರೈತ ಕೆ.ಬಸವರಾಜ ಮಾತನಾಡಿ, ರಾಜ್ಯದಲ್ಲಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ರೈತರ ಹೆಸರಲ್ಲಿ ಅಧಿಕಾರಕ್ಕೆ ಬರುತ್ತಾರೆ. ವಿಮಾನ ಅಪಘಾತದಲ್ಲಿ ಮೃತಪಟ್ಟವವರಿಗೆ 10ಲಕ್ಷ ರೂ. ಪರಿಹಾರ ನೀಡುತ್ತಾರೆ.

ದರೆ, ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡರೆ ಒಂದು ಲಕ್ಷ ರೂ. ಪರಿಹಾರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಕೀಲ ಮಲ್ಲಿಕಾರ್ಜುನ ಮಾತನಾಡಿದರು. ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಯಶೋದಾ, ಖಜಾಂಚಿ ಶರಣಪ್ಪ, ಸದಸ್ಯರಾದ ಮಲ್ಲಿಕಾರ್ಜುನ, ಬಸವರಾಜಪ್ಪ, ಮಂಜುನಾಥ, ಕೊಟ್ರೇಶ್,ಲಕ್ಷ್ಮವ್ವ, ನಿಂಗಮ್ಮ, ಕಾಳಮ್ಮ, ಕೊಟ್ರವ್ವ, ಮಂಗಳಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net