ಈರುಳ್ಳಿ ಬೆಳೆಗಾರರಿಗೆ ಸರ್ಕಾರ ನೆರವಿಗೆ ಬರಲಿ ಎಂದು ಆಗ್ರಹಿಸಿ ಹಡಗಲಿಯಲ್ಲಿ ತಹಸಿಲ್ದಾರ್‌ಗೆ ಒಕ್ಕೂಟ ಮನವಿ

220920 Hadagali Onion Farmers Appeal
ಹೂವಿನಹಡಗಲಿಯಲ್ಲಿ ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ಈರುಳ್ಳಿ ಬೆಳೆಗಾರರ ಒಕ್ಕೂಟದ ತಾಲೂಕು ಘಟಕ ಮಂಗಳವಾರ ಮನವಿ ಸಲ್ಲಿಸಿತು.
Published on

ಹೂವಿನಹಡಗಲಿ: ನಿರಂತರ ಮಳೆಯಿಂದ ಈರುಳ್ಳಿಗೆ ಕೊಳೆ ರೋಗ ತಗುಲಿ ಹಾಳಾಗಿದ್ದು, ಸರ್ಕಾರ ನೆರವಿಗೆ ಬರಬೇಕೆಂದು ಆಗ್ರಹಿಸಿ ತಾಲೂಕು ಈರುಳ್ಳಿ ಬೆಳೆಗಾರರ ಒಕ್ಕೂಟ ಮಂಗಳವಾರ ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ಮನವಿ ಸಲ್ಲಿಸಿದರು.

ಕೊಳೆರೋಗದಿಂದ ಈರುಳ್ಳಿ ಬೆಳೆ ಹಾಳಾಗಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಸಾಲ ಮಾಡಿ ಬಿತ್ತನೆ ಬೀಜ , ಗೊಬ್ಬರ ಹಾಕಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು. ಈರುಳ್ಳಿ ರಪ್ತು ನಿಷೇಧ ಆದೇಶ ಹಿಂಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ರೈತ ಮುಖಂಡರಾದ ಉಮೇಶ, ಶರಣಪ್ಪ, ಯು.ಭದ್ರಗೌಡ, ಡಿ.ಜೆ.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net