ಈರುಳ್ಳಿ ಬೆಳೆಗೆ ಬೆಲೆಗೆ ಸೂಕ್ತ ಬೆಲೆ ಇಲ್ಲ: ಸಿದ್ದೇಶ್

IMG-20231009-WA0026
Published on

ಈರುಳ್ಳಿ ಬೆಳೆಗೆ ಬೆಲೆಗೆ ಸೂಕ್ತ ಬೆಂಬಲ ಬೆಲೆ ಇಲ್ಲ. ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಈರುಳ್ಳಿ ಬೆಳೆಗಾರರ ರಾಜ್ಯ ಅಧ್ಯಕ್ಷ ಸಿದ್ದೇಶ್ ಹೇಳಿದರು.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಅದ್ಯಯನ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದಷ್ಟು ಬೇಗ ಈರುಳ್ಳಿ ಸೇರಿದಂತೆ ಎಲ್ಲ ಬೆಳೆಗಳಿಗೂ ಎಕರೆಗೆ 35000 ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಬಿತ್ತಿದ ಬೆಳೆಗೆ ವಿಮೆ ಬಂದಿಲ್ಲ. ಆದಷ್ಟು ಬೇಗ ಬೆಳೆವಿಮೆ ಬಿಡುಗಡೆ ಮಾಡಬೇಕು. ಜಿಲ್ಲಾಧಿಕಾರಿ ಗಮನಕ್ಕೂ ಈ ವಿಷಯ ತಿಳಿಸಲಾಗಿದೆ. ರೋಗ ಬಿದ್ದ ಬೆಳೆಗಳ ಪ್ರದೇಶಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಮೀನಿಗೆ ತೆರಳಿ ತರಬೇತಿ ಕಾರ್ಯಕ್ರಮ ನಡೆಸಬೇಕು ಎಂದು ಆಗ್ರಹಿಸಿದರು.

ವೀರಣ್ಣ ಕಾಳಗಿ, ವೇದಮೂರ್ತಿ ಬಿಎಂ, ಲೋಕಣ್ಣ ಉಳ್ಳಾಗಡ್ಡಿ, ಈರಣ್ಣ ಹರ್ತಿ, ಉಮೇಶ ಎಚ್. ಕೊಟ್ರೇಶ್ ಶಿವಶಿಂಪಿಗಿ, ಶರಣಪ್ಪ ಮ್ಯಾಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net