ವಿಧಾನ ಪರಿಷತ್​ಗೆ ಸ್ಪರ್ಧಿಸದಿರಲು ಕಾಂಗ್ರೆಸ್​ ನಿರ್ಧಾರ

Congress
Published on

ಬೆಂಗಳೂರು: ವಿಧಾನಪರಿಷತ್​ನ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಮಗೆ ಬಹುಮತ ಇಲ್ಲದ ಕಾರಣ ನಾವು ಅಭ್ಯರ್ಥಿಯನ್ನು ಹಾಕಲ್ಲ ಎಂದು ಹೇಳಿದ್ದಾರೆ.

ರಿಜ್ವಾನ್ ಅರ್ಷದ್​ರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಬಹುಮತ ಇರುವುದರಿಂದ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಅಭ್ಯರ್ಥಿ ಹಾಕಿದರೂ ಗೆಲುವು ಕಷ್ಟಕರ. ಹೀಗಾಗಿ ಸ್ಪರ್ಧೆ ಮಾಡದಿರಲು ಪಕ್ಷ ನಿರ್ಧರಿದೆ ಎನ್ನಲಾಗಿದೆ.

ಸೂಚನೆ ಬಂದಿಲ್ಲ: ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಿರಿ ಎಂದು ನನಗೆ ಹೈಕಮಾಂಡ್ ಹೇಳಿಲ್ಲ. ಅಧ್ಯಕ್ಷರ ನೇಮಕ ವಿಳಂಬ ಬೇಡ. ಬೇಗನೇ ನೇಮಕ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸಿಎಲ್ಪಿ ಹಾಗೂ ವಿಪಕ್ಷ ನಾಯಕ ಮತ್ತು ಅಧ್ಯಕ್ಷ ನೇಮಕ ವಿಚಾರದ ಬಗ್ಗೆ ಯಾವೊಬ್ಬ ನಾಯಕರು ಬಹಿರಂಗ ಹೇಳಿಕೆ ನೀಡುವಂತಾಗಬಾರದು. ಹುದ್ದೆಗಳನ್ನು ವಿಭಜನೆ ಮಾಡಬೇಕು ಎಂಬ ಹೇಳಿಕೆಗಳು ಬರುತ್ತಿವೆ. ಹೈಕಮಾಂಡ್ ತೀರ್ಮಾನ ಮಾಡುವವರೆಗೂ ಇಂತಹ ಹೇಳಿಕೆಗಳು ಬರುತ್ತಲೇ ಇರುತ್ತವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net