ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೀಡಾಗಿ ಸಾವು!?

Feature
ಒಳಚಿತ್ರದಲ್ಲಿ ಕುಸಿದು ಬೀಳುತ್ತಿರುವ ದೃಶ್ಯ.
Published on

ಬೆಂಗಳೂರು: ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವಕನೊಬ್ಬ ಎದೆನೋವು ಕಾಣಿಸಿಕೊಂಡು ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ದೈಹಿಕ ಕಸರತ್ತು ನಡೆಸುತ್ತ ಆಯಾಸಗೊಂಡು ಆತ ಮೆಟ್ಟಿಲ ಬಳಿ ಬಂದು ಕುಳಿತು ಹಾಗೇ ನೆಲಕ್ಕುರುಳಿ ಬಿದ್ದುಹೋಗಿರುವ ದೃಶ್ಯವೊಂದು ಸಿಸಿಟಿವಿ ಕ್ಲಿಪ್ಪಿಂಗ್​ನಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ. ಸುಸ್ತಾಗಿ ಬಂದು ಕುಳಿತು ನೀರು ಕುಡಿದು ಮುಖ ಒರೆಸಿಕೊಂಡ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನ ಬನಶಂಕರಿಯ ಗೋಲ್ಡ್ ಜಿಮ್​ನಲ್ಲಿ ನಡೆದಿರೋ ಘಟನೆ ಎಂಬಂತೆ ಇದು ವೈರಲ್​ ಆಗುತ್ತಿದ್ದು, ಆಗಸ್ಟ್ 25ರಂದು ಈ ಘಟನೆ ನಡೆದಿದ್ದು, ಎಲ್ಲಿ ನಡೆದಿರುವುದು ಹಾಗೂ ಸಿಸಿಟಿವಿ ಕ್ಲಿಪ್ಪಿಂಗ್​ನಲ್ಲಿ ಕಾಣಿಸಿಕೊಂಡಿರುವ ಯುವಕ ಯಾರು ಎಂಬ ಕುರಿತು ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಬಗ್ಗೆ ಬನಶಂಕರಿ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net