2-3 ಸಲ ಅಲ್ಲ, 23 ಸಲ; ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ...

Untitled-5
Published on

ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಒಮ್ಮೆ ತಪ್ಪಿಸಿಕೊಳ್ಳಬಹುದು, ಇಲ್ಲವೇ ಎರಡು ಸಲ, ಮೂರು ಸಲ ತಪ್ಪಿಸಿಕೊಳ್ಳಬಹುದು. ಆದರೆ ಇಲ್ಲೊಬ್ಬ ಸವಾರ ಎಷ್ಟು ಸಲ ಸಂಚಾರಿ ನಿಯಮ ಉಲ್ಲಂಘಿಸಿದ್ದಾನೆ ಎಂಬುದನ್ನು ಕೇಳಿದವರು ಒಮ್ಮೆ ಹುಬ್ಬೇರಿಸುವುದು ಸಹಜ.

ಅಂದಹಾಗೆ ಇವರು ಅಕ್ಷರಶಃ ರಿಪೀಟ್ ಒಫೆಂಡರ್. ಆದರೆ ಎಷ್ಟು ಸಲ ಸಂಚಾರ ನಿಯಮ ಉಲ್ಲಂಘಿಸಿದ ತಪ್ಪಿಸಿಕೊಂಡರೂ ಕೊನೆಗೆ ತಮ್ಮ ಕೈಯಿಂದ, ದಂಡಪ್ರಯೋಗದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಇವರಿಗೆ ದಂಡ ವಿಧಿಸುವ ಮೂಲಕ ಬೆಂಗಳೂರು ಸಂಚಾರಿ ಪೊಲೀಸರು ರವಾನಿಸಿದ್ದಾರೆ.

ಒಂದಲ್ಲ ಎರಡಲ್ಲ.. ಒಟ್ಟು 23 ಸಲ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರನಿಗೆ ಬೆಂಗಳೂರಿನ ಸಂಚಾರ ಪೂರ್ವ ವಿಭಾಗದ ಕೆ.ಆರ್. ಪುರಂ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ರಾಮನಾಯಕ್ ಅವರು 10,800 ರೂ. ದಂಡ ವಿಧಿಸಿದ್ದಾರೆ. 'ಎಷ್ಟ್​ ಸಲ ಸಿಗ್ನಲ್​ ಜಂಪ್ ಮಾಡಿದ್ದೆ ಗೊತ್ತಾ?, ಸಿಕ್ಕಿ ಹಾಕಿಕೊಳ್ಳಲೇ ಇಲ್ಲ..' ಎಂಬಂತೆ ಮತ್ತೆ ಮತ್ತೆ ಸಂಚಾರ ನಿಯಮ ಉಲ್ಲಂಘಿಸಿರುವವರಿಗೆ ಇದೊಂದು ಎಚ್ಚರಿಕೆ ಗಂಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net