ಆತ್ಮ ಸಾಕ್ಷಾತ್ಕಾರ ಮಾಡುವವ ನಿಜ ಗುರು

mlp 19-1 vedant
ಮಹಾಲಿಂಗಪುರದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಲಿಂ. ಬಸವಾನಂದ ಸ್ವಾಮಿಗಳ 51ನೇ ವರ್ಷಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಬೀದರ ಚಿದಂಬರಾಶ್ರಮದ ಡಾ. ಶಿವಕುಮಾರ ಶ್ರೀಗಳು ಪ್ರವಚನ ನೀಡಿದರು. ಸಹಜಾನಂದ ಶ್ರೀಗಳು, ಮಾತೋಶ್ರೀ ಲಕ್ಷ್ಮಿದೇವಿ ಇದ್ದರು.
Published on

ಮಹಾಲಿಂಗಪುರ: ಬ್ರಹ್ಮ ಜ್ಞಾನ ಪಡೆದ ಮತ್ತು ಜಾತಿ, ಧರ್ಮ, ಕುಲಗೋತ್ರ ನೋಡದೆ ತಮ್ಮ ಹತ್ತಿರ ಬರುವ ಸಾಧಕರಿಗೆ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಹಕರಿಸುವವನೇ ನಿಜ ಗುರು ಎಂದು ಬೀದರ ಚಿದಂಬರಾಶ್ರಮದ ಡಾ. ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಲಿಂ. ಬಸವಾನಂದ ಸ್ವಾಮಿಗಳ 51ನೇ ವರ್ಷಗಳ ಪುಣ್ಯಾರಾಧನೆ ನಿಮಿತ್ತ ಶನಿವಾರ ಆಯೋಜಿಸಿದ್ದ ವೇದಾಂತ ಪರಿಷತ್ ಸಮಾರೋಪ ಕಾರ್ಯಕ್ರಮದಲ್ಲಿ ಸಿದ್ಧಾರೂಢ ಶ್ರೀಗಳ ಉಪಕಾರ ಸ್ಮರಣೆ ವಿಷಯ ಕುರಿತು ಆಶೀರ್ವಚನ ನೀಡಿದರು.

ಜೀವನದಲ್ಲಿ ನಾವು ಎಷ್ಟೇ ದೊಡ್ಡವರಾದರೂ ಗುರುವಿಗಿಂತ ದೊಡ್ಡವರಿಲ್ಲ. ನಮ್ಮ ಜೀವನದ ಉದ್ದೇಶ ಸಿದ್ಧಾರೂಢರ ಪ್ರಚಾರ. ಅವರ ಪ್ರಚಾರ ಆದರೆ ಅದು ನಮ್ಮ ಪ್ರಚಾರ ಆದ ಹಾಗೆ. 31 ದೇಶಗಳ ರಾಜರನ್ನು ಕರೆದುಕೊಂಡು ಸಿದ್ಧಾರೂಢರ ಪಾದಕ್ಕೆ ಹಾಕಿದವರು ಅಕ್ಕಲಕೋಟ ಶರಣರು. ಹಲವು ಜಾಣರು ಮಠಗಳನ್ನು ತಮ್ಮ ಹೆಸರಿಗೆ ಮಾಡುವ ಕರ್ತವ್ಯದಲ್ಲಿದ್ದಾರೆ. ನಾವು ಇನ್ನುವರೆಗೂ ಸಿದ್ಧಾರೂಢರ ಯಾವ ಮಠವನ್ನೂ ನಮ್ಮ ಹೆಸರಿಗೆ ಮಾಡಿಕೊಂಡಿಲ್ಲ ಎಂದರು.

ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಮಾತನಾಡಿದರು.

ಹೊಸೂರಿನ ಪರ್ಮಾನಂದ ಶ್ರೀಗಳು, ಮಾತೋಶ್ರೀ ಲಕ್ಷ್ಮೀದೇವಿ, ಸ್ಥಳೀಯ ಸಿದ್ಧಾರೂಢ ಮಠದ ಉತ್ತರಾಧಿಕಾರಿ ಸಿದ್ಧಾನಂದ ಭಾರತಿ ಶ್ರೀಗಳು, ಜಮಖಂಡಿಯ ಕ್ರಿಷ್ಣಾನಂದ ಅವಧೂತರು, ಸತೀಶ ಪೂಜ್ಯರು, ಸಿದ್ಧಾರೂಢ ಪೂಜ್ಯರು, ಮಾತೋಶ್ರೀ ವರದಾದೇವಿ ಪ್ರವಚನ ನೀಡಿದರು. ಮೇಹಬೂಬ ಸನದಿ ಹಾಗೂ ಸಂಗಡಿಗರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಶರಣ ಎಂ. ಎಂ. ಕಟಗಿ, ಡಾ. ಬಿ. ಡಿ. ಸೋರಗಾಂವಿ, ಲಕ್ಕಪ್ಪ ಚಮಕೇರಿ, ಮಲ್ಲಪ್ಪ ಭಾವಿಕಟ್ಟಿ, ಪ್ರಭು ಬೆಳಗಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಅಲ್ಲಪ್ಪ ಗುಂಜಿಗಾಂವಿ, ಸಿ.ಬಿ. ಪಟ್ಟಣಶೆಟ್ಟಿ, ಕಲ್ಲಪ್ಪ ಚಿಂಚಲಿ, ಶಂಕರೆಪ್ಪ ಹಣಗಂಡಿ, ಎಂ.ಪಿ. ಅಂಗಡಿ, ಶಿವಾನಂದ ಅಂಗಡಿ, ಬಸವಾನದಂ ಜಿಟ್ಟಿ, ಶಿವನಗೌಡ ಪಾಟೀಲ, ಶ್ರೀಶೈಲ ನುಚ್ಚಿ ಇದ್ದರು.

ಶಿಕ್ಷಕ ಎಸ್. ಎಂ. ಮುಗಳಖೋಡ ಸ್ವಾಗತಿಸಿದರು. ಹುಮಾಯೂನ್ ಸುತಾರ ನಿರೂಪಿಸಿದರು. ಡಾ. ಬಿ. ಡಿ. ಸೋರಗಾವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net