

ಶಿವಮೊಗ್ಗ: ಶ್ರೀಮಂತಿಕೆಯ ಬದುಕಿಗಿಂತ ನೆಮ್ಮದಿಯ ಬದುಕು ನಮ್ಮದಾಗಬೇಕಿದೆ. ಹಣದ ಹಿಂದಿನ ಬದುಕಿಗಿಂತ ಗುಣದ ಬದುಕು ಅತಿಮುಖ್ಯ ಎಂದು ರಾಷ್ಟಿçÃಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ಎಸ್.ಆರ್.ನಾಗಪ್ಪ ಶೆಟ್ಟಿ ಸ್ಮಾರಕ ರಾಷ್ಟಿçÃಯ ಅನ್ವಯಿಕ ವಿe್ಞÁನ ಕಾಲೇಜಿನಿಂದ ಸೋಮವಾರ ಏರ್ಪಡಿಸಿದ್ದ ಬಿಸಿಎ ಮತ್ತು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಅಂದವಾಗಿರುವುದಕ್ಕಿAತ ಆನಂದವಾಗಿರುವ ಬದುಕು ಬೇಕಿದೆ. ಹೀಗಾದರೆ ಮಾತ್ರ ವ್ಯಕ್ತಿ ಕಳೆದು ಹೋದರೂ ಉತ್ತಮ ವ್ಯಕ್ತಿತ್ವ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಚೆನ್ನಾಗಿ ಕಾಣಬೇಕಾಗಿರುವುದು ಮುಖವಲ್ಲ, ವ್ಯಕ್ತಿತ್ವ ಮತ್ತು ಆಂತರ್ಯದ ಶುದ್ಧತೆ ಎಂದರು.
ಸಹನೆ ಇಲ್ಲದವ ಎಂದಿಗೂ ಸಾರಥಿಯಾಗಲಾರ. ತಾಳ್ಮೆ ಮತ್ತು ಉಳಿಸಿಕೊಳ್ಳುವ ಜಾಣ್ಮೆ ವ್ಯಕ್ತಿಯದ್ದಾಗಬೇಕಿದೆ. ಎಲ್ಲಿ ಹುಟ್ಟಬೇಕು ಎಂಬುದು ನಮ್ಮ ನಿರ್ಧಾರವಲ್ಲ. ಆದರೆ ಬದುಕಿನಲ್ಲಿ ಎಲ್ಲಿ ಮುಟ್ಟಬೇಕು ಎಂಬುದು ನಮ್ಮ ತೀರ್ಮಾನವಾಗಿರುತ್ತದೆ ಎಂದು ಹೇಳಿದರು.
ಕುವೆಂಪು ವಿವಿ ಪ್ರಾಣಿಶಾಸö ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಮಾತನಾಡಿ, ಗುರಿಯ ಸ್ಪಷ್ಟ ಕಲ್ಪನೆ ವಿದ್ಯಾರ್ಥಿಗಳಲ್ಲಿರಬೇಕು. ಕನಸುಗಳನ್ನು ಕಾಣುವ ವ್ಯಕ್ತಿ ಸದಾ ಆ ಕನಸುಗಳನ್ನು ಸಾಽಸಲು ಪ್ರಯತ್ನ ಪಡುತ್ತಾನೆ. ಹೀಗಾಗಿ ಮೊದಲು ಕನಸುಗಳನ್ನು ಕಾಣಲು ಪ್ರಾರಂಭಿಸಬೇಕು ಎಂದರು.
ಪ್ರಾಚಾರ್ಯ ಡಾ. ಕೆ.ಎಲï.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗಗಳ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.