

ಹುಬ್ಬಳ್ಳಿ : ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ.
ಯಶವಂತಪುರ - ಹಜರತ್ ನಿಜಾಮುದ್ದೀನ್ ಏಕಮುಖ ವಿಶೇಷ ರೈಲು ಜೂ. 23 ರಂದು ರಾತ್ರಿ 11.40 ಕ್ಕೆ ಯಶವಂತಪುರದಿಂದ ಹೊರಟು, 26 ರಂದು ಬೆಳಗ್ಗೆ 6.30 ಕ್ಕೆ ಹಜರತ್ ನಿಜಾಮುದ್ದೀನ್ ತಲುಪಲಿದೆ.
ಈ ವಿಶೇಷ ರೈಲು ತುಮಕೂರು, ಬಾಣಸಂದ್ರ, ಅರಸಿಕೆರೆ, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಪುಣೆ, ಕೋಪರಗಾಂ, ಮನ್ಮಾಡ್, ಭುಸಾವಲ್, ಇಟಾರ್ಸಿ, ಭೋಪಾಲ್, ಬೀನಾ, ವೀರಾಂಗಣ ಲಕ್ಷ್ಮೀಬಾಯಿ ಝುಾನ್ಸಿ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.