ಒನ್ ವೇ ಎಕ್ಸ್​ಪ್ರೆಸ್ ರೈಲು

indian-railways-1738842664
Published on

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ನಿವಾರಣೆಗಾಗಿ ನೈಋತ್ಯ ರೈಲ್ವೆ ವಲಯದಿಂದ ನ. 13ರಂದು ಹುಬ್ಬಳ್ಳಿ-ಯಲಹಂಕ ಮಧ್ಯೆ ಒನ್ ವೇ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ.

ರಾತ್ರಿ 8 ಗಂಟೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 9.20ಕ್ಕೆ ಯಲಹಂಕ ನಿಲ್ದಾಣ ತಲುಪಲಿದೆ.

ಅಣ್ಣಿಗೇರಿ, ಗದಗ, ಭಾನಾಪುರ, ಕೊಪ್ಪಳ, ಗಿಣಿಗೆರಾ, ಮುನಿರಾಬಾದ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ತುಂತಕಲ್, ಅನಂತಪುರ, ಧರ್ವವರಮ್ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಮ್ ಹಿಂದುಪುರ ಮತ್ತು ಗೌರಿಬಿದನೂರ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net