

ಬಾದಾಮಿ;ಜನ ಸಾಮಾನ್ಯರ ವೇದಿಕೆ ಕರ್ನಾಟಕ ವತಿಯಿಂದ ಅ. 2 ರಿಂದ 13ರ ವರೆಗೆ ಬೀದರ್ನಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಯುವ ಪರಿವರ್ತನೆ ಯಾತ್ರೆಯು ಸೋಮವಾರ ನಗರಕ್ಕೆ ಆಗಮಿಸಿತು.ಬೆಳಗ್ಗೆ ಬಸವೇಶ್ವರ ಸರ್ಕಲ್ನಿಂದ ಆರಂಭವಾದ ಜಾಥಾ ಮೆರವಣಿಗೆಯು ಮುಖ್ಯ ರಸ್ತೆ ಮೂಲಕ ಅಂಬೇಡ್ಕರ್ ಸರ್ಕಲ್ ವರೆಗೆ ಆಗಮಿಸಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಜನ ಸಾಮಾನ್ಯರ ವೇದಿಕೆ ಜಿಲ್ಲಾ ಸಂಚಾಲಕ ಯಲ್ಲಪ್ಪ ಹೆಗಡೆ ಮಾತನಾಡಿ, ಕರ್ನಾಟಕ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನಪ್ರತಿನಿಧಿಗಳ ರ್ನಿಲಕ್ಷ ಸರ್ಕಾರದ ಗಮನಕ್ಕೆ ತರಲು ಪಾತೀತ, ಜಾತ್ಯಾತಿತವಾಗಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯುವ ಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಣ, ಸಬಲೀಕರಣಕ್ಕಾಗಿ ಒಕ್ಕೂರಲಿನ ಧ್ವನಿ ರಾಜ್ಯ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಎಸ್.ಡಿ. ಜೋಗಿನ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಬಸವರಾಜ ಡೊಳ್ಳಿನ, ಹನಮಂತ ಅಪ್ಪನ್ನವರ ಸೇರಿ ಇತರರಿದ್ದರು. ನಂತರ ಗದಗ ಜಿಲ್ಲೆಯ ರೋಣ ಪಟ್ಟಣಕ್ಕೆ ಯಾತ್ರೆ ಬೀಳ್ಕೊಡಲಾಯಿತು.
ಬಾದಾಮಿ ನಗರದಲ್ಲಿ ಯುವ ಪರಿವರ್ತನೆ ಯಾತ್ರೆ ಉದ್ದೇಶಿಸಿ ಯಲ್ಲಪ್ಪ ಹೆಗಡೆ ಮಾತನಾಡಿದರು. ಮುಖಂಡರಾದ ಎಸ್.ಡಿ. ಜೋಗಿನ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಬಸವರಾಜ ಡೊಳ್ಳಿನ, ಹನಮಂತ ಅಪ್ಪನ್ನವರ ಸೇರಿ, ಇತರರಿದ್ದರು.