

ಪ್ರಶಾಂತ ಭಾಗ್ವತ ಉಡುಪಿ
ವಿಶೇಷ ಕಾರ್ಯಯೋಜನೆಗಳ ಮೂಲಕವೇ ನಾಡಿನ ಗಮನ ಸೆಳೆಯುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ತಮ್ಮ ಚತುರ್ಥ ಪರ್ಯಾಯವನ್ನೂ ಸಹ ವಿಶಿಷ್ಟವಾಗಿಯೇ ಆಚರಿಸುತ್ತಿದ್ದಾರೆ. ಕೋಟಿ ಗೀತಾ ಲೇಖನ ಅಭಿಯಾನದ ಮೂಲಕ ವಿಶ್ವಗೀತಾ ಪರ್ಯಾಯವನ್ನು ಮುನ್ನಡೆಸಿದ್ದಾರೆ.
ಪರ್ಯಾಯದಲ್ಲಿ ನಿತ್ಯವೂ ಸಂಭ್ರಮವಿರಬೇಕು, ಅದನ್ನು ಕೃಷ್ಣನ ಭಕ್ತರೆಲ್ಲರೂ ನೋಡಿ ಆನಂದಗೊಳ್ಳಬೇಕೆಂಬ ಸಂಕಲ್ಪದಿಂದ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಪರ್ಯಾಯದ ಆರಂಭದಿಂದ ಇಲ್ಲಿಯವರೆಗೆ 1 ಸಾವಿರ ಸಂಖ್ಯೆಯಲ್ಲಿ ಕಾರ್ಯಕ್ರಮಮ ನಡೆದಿದ್ದು, ಪುತ್ತಿಗೆ ಮಠ ಹೊಸ ದಾಖಲೆ ನಿರ್ಮಿಸಿದೆ.
ಕಲಾ ಪ್ರಕಾರ ಪ್ರದರ್ಶನ ಸಂಖ್ಯೆ
ಸಂಗೀತ ಕಚೇರಿ 367
ಭರತನಾಟ್ಯ 377
ನಾಟಕ 04
ಯಕ್ಷಗಾನ 82
ಹರಿಕಥೆ 48
ವಾದ್ಯಗೋಷ್ಠಿ 72
ಮನರಂಜನೆ 50
ಒಟ್ಟು 1,000
ಪೊಡವಿಗೊಡೆಯ, ಅನ್ನಬ್ರಹ್ಮನಾದ ಶ್ರೀಕೃಷ್ಣನು ಜ್ಞಾನ ಬ್ರಹ್ಮ ಹಾಗೂ ಕಲಾ ಬ್ರಹ್ಮನಾಗಿ ತನ್ನ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ. ಆತನ ಸನ್ನಿಧಿಯಲ್ಲಿ ನಮ್ಮ ಚತುರ್ಥ ಪರ್ಯಾಯವನ್ನು ಸ್ಮರಣೀಯವಾಗಿಸಲು ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಸಂಭ್ರಮಕ್ಕಷ್ಟೇ ಸೀಮಿತವಾಗದೆ ಕಲೆ-ಕಲಾವಿದರ ರಕ್ಷಣೆ, ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸುವುದು ಹಾಗೂ ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ. ಸನಾತನ ಧರ್ಮ, ಪರಂಪರೆಯನ್ನು ಪ್ರಜ್ವಲಿಸುವಂತೆ ಮಾಡುವುದು ನಮ್ಮ ಸಂಕಲ್ಪ, ಮಹದಾಸೆ ಕೂಡ. |ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ