

ಅರಟಾಳ: ಧರ್ಮ ರಕ್ಷಣೆ ಮಾಡುವವರನ್ನು ಧರ್ಮ ರಸುತ್ತದೆ. ಧರ್ಮ ಮಾರ್ಗದಲ್ಲಿ ಸಾಗುವವರ ದಾರಿ ಸುಗಮವಾಗಿರುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಶಿವಾರ್ಚಾಯರು ಹೇಳಿದರು.
ಗ್ರಾಮದ ಹೊರವಲಯದಲ್ಲಿರುವ ಗುಡ್ಡದ ಶ್ರೀ ಶಿವಲಿಂಗೇಶ್ವರ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ, ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರೂ ಲಿಂಗ ಪೂಜೆ ಮಾಡಿ ಪರಮಾತ್ಮನ ಆಶೀರ್ವಾದ ಪಡೆದುಕೊಳ್ಳಬೇಕು. ದಾನ&ಧರ್ಮ, ಗುರು ದರ್ಶನ ಮಾಡಬೇಕು. ಸದ್ಗುರುವಿನ ದರ್ಶನ ಪಡೆಯುವುದೇ ನಿಜವಾದ ಭಾಗ್ಯ. ಎಲ್ಲರೂ ಅಧ್ಯಾತ್ಮದ ದಾರಿಯಲ್ಲಿ ನಡೆದು ದೇವರ ಸ್ಮರಣೆ ಮಾಡಬೇಕು ಎಂದರು.
ಜಮಖಂಡಿ ಕಲ್ಯಾಣ ಮಠದ ಶ್ರೀ ಗೌರಿಶಂಕರ ಶಿವಾಚಾರ್ಯರು, ಜೈನಾಪುರದ ಶ್ರೀರೇಣುಕಾ ಶಿವಾಚಾರ್ಯರು, ಮಾಂಜರಿ ಕಾಡಸಿದ್ಧೇಶ್ವರ ಆಶ್ರಮದ ಶ್ರೀಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯರು, ಅಪ್ಪುಗೌಡ ಪಾಟೀಲ, ವಿನೋಬಾ ನೇಮಗೌಡ, ಸಂದೀಪ ಬುಲಗೌಡ, ಸುಜೀತ ಪಾಟೀಲ, ವಿವೇಕಾನಂದ ಮಠದ, ಜ್ಯೋತಿಬಾ ಜಾಧವ, ಭೀಮು ಜಾಧವ, ಭರತ ಶೇಗುಣಸಿ, ರಾಜುಗೌಡ ಪಾಟೀಲ, ಬಸುಗೌಡ ಹೊನಗೌಡ, ರಾಜಕುಮಾರ ಮುದಗೌಡರ, ಸಿದರಾಯ ಜಮಖಂಡಿ ಇತರರಿದ್ದರು.