

ಯರಗಟ್ಟಿ: ಕುಟುಂಬ ತೊರೆದು ನಿಸ್ವಾರ್ಥದಿಂದ ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರ ಕಾರ್ಯ ಶ್ಲಾಘನೀಯ ಎಂದು ಬಾಗೋಜಿಕೊಪ್ಪ ಹಿರೇಮಠದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಬಾಗೋಜಿಕೊಪ್ಪದ ಹಿರೇಮಠದಲ್ಲಿ ಮಾಜಿ ಸೈನಿಕರ ಸಮನ್ವಯ ಸಮಿತಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿ ಮನೆಯಿಂದ ಒಬ್ಬರು ಸೇನೆ ಸೇರಿ ದೇಶಸೇವೆ ಮಾಡಬೇಕು ಎಂದರು.
ಮಾಜಿ ಸೈನಿಕ ಕುಮಾರ ಹಿರೇಮಠ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಒಂದು ಕಡೆಯಾದರೆ ಕಾರ್ಗಿಲ್ ಯುದ್ಧದಲ್ಲಿ ಮರಣ ಅಪ್ಪಿದ ನೂರಾರು ಯೋಧರ ಬಲಿದಾನದ ದುಃಖ ಆವರಿಸಿದೆ. ಕಾರ್ಗಿಲ್ ಹೋರಾಟದ ಎಲ್ಲ ಘಟನೆಗಳು ಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.
ದುಂಡಪ್ಪ ಕೊಳವಿ, ಎಸ್.ಟಿ.ಕಪ್ಪತ್ತಿ, ಎಂ.ಎಸ್.ಬಬಲಾದಿಮಠ, ಎಸ್.ಎಸ್.ಬಾಳಿಕಾಯಿ, ಎಂ.ಎಸ್.ಪಾಟೀಲ, ಹುಸೇನಸಾಬ್ ಕರ್ನಾಚಿ, ಈರಪ್ಪ ಚುಲಮೂರ, ಶಿವಾನಂದ ಯರಝರ್ವಿ, ರಾಜೇಶ ಕೊಂಜಾರ, ಈರಪ್ಪ ಸರದಾರ, ಲಕ್ಷ್ಮಣ ಭಜಂತ್ರಿ, ಈರಪ್ಪ ಶಿಗ್ಗಾಂವಿ, ಫಕೀರಪ್ಪ ಬಾಗಿಲದ ಇತರರು ಇದ್ದರು.