ಬಳ್ಳಾರಿ : ಸಂಡೂರು ತಾಲೂಕಿನ ಮಾಳಾಪುರ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ನಿವಾಸಿ ದೊಡ್ಡಕಾಶಣ್ಣ(47) ಮೃತ. ಜಮೀನಿನಗಾಗಿ ನಡೆದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ರಾಜಿಗಾಗಿ ಗ್ರಾಮದ ಅಗಸೆಯಲ್ಲಿ ಪಂಚಾಯಿತಿ ಮಾಡಿದ್ದಾರೆ. ಹನುಮೇಶ್ ಆತನ ಸಹಚರರು ಪಂಚಾಯಿತಿ ಮಾಡುವುದು ಬೇಡವೆಂದು ಹೊರ ನಡೆದು ದೂರುದಾರ ಸಣ್ಣಕಾಶಣ್ಣ ಅವರ ಗುಂಪಿನೊಂದಿಗೆ ಗಲಾಟೆ ನಡೆಸುವ ಸಮಯದಲ್ಲಿ ದೊಡ್ಡಕಾಶಣ್ಣ ಅವರಿಗೆ ಗ್ರಾಮದ ಜನರು ಗಲಾಟೆಯನ್ನು ಬಿಡಿಸಿದ್ದಾರೆ. ನಂತರ ಮನೆಗೆ ತೆರಳಿದ ದೊಡ್ಡಕಾಶಣ್ಣ ಅವರು ಮನೆಯಲ್ಲಿ ಎದೆ ಹಿಡಿದುಕೊಂಡು ನೋವು ಆಗುತ್ತದೆ ಎಂದಾಗ ಆತನನ್ನು ಬಿಮ್ಸ್ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಣ್ಣ ಕಾಶಣ್ಣ ಅವರು ಹೊನ್ನುರಸ್ವಾಮಿ, ಹನುಮೇಶ್, ವಿರೇಶ್ ಅವರ ವಿರುದ್ಧ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.