ಕಾರು ಚಾಲಕನ ಅವಾಂತರಕ್ಕೆ ಓರ್ವ ಬಲಿ

car palty near siddappa circle
ಶಿವಮೊಗ್ಗದ ಸಿದ್ದಯ್ಯ ರಸ್ತೆ ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿತ್ತು.
Published on

ಶಿವಮೊಗ್ಗ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಂಗಳವಾರ ತಡರಾತ್ರಿ ಕಾರು ಚಾಲಕನ ಅವಾಂತರಕ್ಕೆ ಬೈಕ್ ಸವಾರ ಬಲಿಯಾಗಿದ್ದಾನೆ.

ನಗರದ ಸಿದ್ದಯ್ಯ ರಸ್ತೆ ವೃತ್ತದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮೂರ್ನಾಲ್ಕು ಬೈಕ್‌ಗಳಿಗೆ ಸರಣಿ ಅಪಘಾತಪಡಿಸಿದ್ದು ಅದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ, ಗೋಪಾಳದ ಧನುಷ್(20) ಮೃತಪಟ್ಟಿದ್ದು, ಪ್ರಜ್ವಲ್ (21) ಎಂಬಾತ ಗಾಯಗೊಂಡಿದ್ದಾನೆ. ಕಾರಿನಲ್ಲಿ ಇಬ್ಬರು ಯುವತಿಯರು ಕೂಡ ಇದ್ದರು ಎನ್ನಲಾಗಿದೆ.

ಅಪಘಾತದ ಬಳಿಕ ಸ್ಥಳೀಯರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಅತಿ ವೇಗವೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ದೂರಿದರು. ಪಶ್ವಿಮ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಾಲಕನ ವಿರುದ್ಧ ದೂರು ದಾಖಲಾಗಿದ್ದು ಗಾಯಗೊಂಡಿರುವ ಪ್ರಜ್ವಲ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಸಾಗರ ರಸ್ತೆಯ ಪೊಲೀಸ್ ಲೇಔಟ್ ಸಮೀಪದ ನಿವಾಸಿಗಳೆಂದು ಹೇಳಲಾಗಿದ್ದು ಅನಾಹುತದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net