

ಗೋಕಾಕ: ಬಾಬು ಜಗಜೀವನರಾಂ ಒಬ್ಬ ವ್ಯಕ್ತಿಯಲ್ಲ ಜನಶಕ್ತಿಯಾಗಿದ್ದರು ಎಂದು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ ಹೇಳಿದರು.
ನಗರದ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ನಗರಸಭೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗಜೀವನರಾಂ ಅವರು ಕಾಯಕ, ಶರಣರ ತತ್ವಗಳನ್ನು ಪಾಲಿಸಿ ಜೀವನ ನಡೆಸಿದವರು. ಸ್ವಾರ್ಥಕ್ಕಾಗಿ ದುಡಿಯದೆ ದೇಶಕ್ಕಾಗಿ ದುಡಿದವರು. ಈ ದಿನವನ್ನು ಸಮಾನತೆ ದಿನ ಎಂದು ಆಚರಿಸುತ್ತೇವೆ ಎಂದು ಹೇಳಿದರು.
ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಡಾ.ಸಿ.ಕೆ.ನಾವಲಗಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡರಾದ ಗೋವಿಂದ ಕಳ್ಳಿಮನಿ, ವೀರಭದ್ರ ಮೈಲನ್ನವರ, ಅಜಿತ ಹರಿಜನ, ರಾಮಪ್ಪ ಮರೆಪ್ಪಗೋಳ, ಸುಧೀರ ಜೊಡಟ್ಟಿ, ಅಧಿಕಾರಿಗಳಾದ ಎ.ಬಿ.ಮಲ್ಲಬನ್ನವರ, ಬಿ.ಎ.ಮಾಲದಿನ್ನಿ, ಎಂ.ಎಂ.ನದ್ಾ, ಎಲ್.ಕೆ.ತೋರಣಗಟ್ಟಿ, ಜಯಶೆ ತಾಂಬೂಳೆ, ಡಿ.ಎಸ್. ಕೂಡವಕ್ಕಲಿಗ, ಡಾ.ಮೋಹನ ಕಮತ, ಡಾ.ಎಂ.ಎಸ್.ಕೊಪ್ಪದ ಇದ್ದರು.