ಪ್ರಾಥಮಿಕ ಜ್ಞಾನ ಇಲ್ಲದ ಆರ್.ಅಶೋಕ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಿರುವುದು ರಾಷ್ಟ್ರೀಯ ದುರಂತಗಳಲ್ಲಿ ಒಂದು: ಮಹದೇವಪ್ಪ

h.c.mahadevappa-600x445
Published on

ಮೈಸೂರು: ಯಾವ ನಿಗಮವು ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಎಂಬ ಪ್ರಾಥಮಿಕ ಜ್ಞಾನ ಇಲ್ಲದ ಆರ್.ಅಶೋಕ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಿರುವುದು ರಾಷ್ಟ್ರೀಯ ದುರಂತಗಳಲ್ಲಿ ಒಂದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ರಾಜೀನಾಮೆಗೆ ಒತ್ತಾಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆ ಸಂಬಂಧ ಎಕ್ಸ್ ಜಾಲತಾಣದಲ್ಲಿ ತಿರುಗೇಟು ನೀಡಿರುವ ಅವರು, ಮಾಹಿತಿ ತಿಳಿಯದೆ ಮಾತನಾಡುವ ನೀವು ಮೊದಲು ರಾಜೀನಾಮೆ ನೀಡುವುದು ಈ ವೇಳೆ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಪಕ್ಷವು ಶತ ದಡ್ಡರ ಪಕ್ಷ ಎಂದು ಜಗತ್ತಿಗೇ ತಿಳಿದಿದ್ದು ಅದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಯಾವ ನಿಗಮವು ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಎಂಬ ಸಣ್ಣ ಮಾಹಿತಿಯನ್ನು ತಿಳಿದುಕೊಳ್ಳದೆ ಸುಳ್ಳು ಹರಡುವ ನಿಮ್ಮನ್ನು ಆ ನಿಮ್ಮ ದೇವದೂತನೆ ಕಾಪಾಡಬೇಕು. ರಾಜ್ಯ ಬಿಜೆಪಿ ಇನ್ನಾದರೂ ಒಳ್ಳೆಯ ಬುದ್ಧಿ ಕಲಿಯಿರಿ ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net