ಒಂದು ರಾಷ್ಟ್ರ, ಒಂದು ಚುನಾವಣೆ ಚರ್ಚಾ ಸ್ಪರ್ಧೆ

25 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹುರಕಡ್ಲಿ ಅಜ್ಜ ಸ್ಮರಣಾರ್ಥ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಭಾರತದ ಅನಿವಾರ್ಯತೆ ಕುರಿತು ಚರ್ಚಾ ಸ್ಪರ್ಧೆಯನ್ನು ಮಂಗಳವಾರ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಒಟ್ಟು 18 ತಂಡಗಳು ಭಾಗವಹಿಸಿದ್ದವು. ಚಿಕ್ಕೋಡಿಯ ಕೆಎಲ್​ಇ ಸೊಸೈಟಿ ಕಾನೂನು ಮಹಾವಿದ್ಯಾಲಯ (ಪ್ರ), ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಕಾನೂನು ಕಾಲೇಜು (ದ್ವಿ) ಹಾಗೂ ಬೆಳಗಾವಿಯ ಆರ್​.ಎಲ್​.ಕಾನೂನು ಮಹಾವಿದ್ಯಾಲಯ (ತೃ) ಸ್ಥಾನ ಪಡೆದಿವೆ.

ಅತಿಥಿಗಳು ವಿಜೇತರಿಗೆ ಬಹುಮಾನವನ್ನು ವಿತರಿಸಿ ಒಂದು ರಾಷ್ಟ್ರ ಒಂದು ಚುನಾವಣೆ ಭಾರತದ ಅನಿವಾರ್ಯತೆ ವಿಷಯವು ನಮ್ಮ ದೇಶಕ್ಕೆ ಅತ್ಯಂತ ಪ್ರಸ್ತುತ ವಿಷಯವಾಗಿದೆ ಎಂದು ವಿವರಿಸಿದರು.

ಸ್ಪರ್ಧೆ ತೀರ್ಪುಗಾರರಾಗಿ ಡಾ. ಪಿ.ಎ. ಪೊಲೀಸ್​ಪಾಟೀಲ, ಡಾ. ಎಸ್​. ಎಸ್​. ಶ್ರೀಗಿರಿ, ಆರ್​.ಕೆ. ನಾವಲಗಿಮಠ ಆಗಮಿಸಿದ್ದರು. ಡಾ. ಸವಿತಾ ಪಾಟೀಲ, ಡಾ. ಎಸ್​.ಎಸ್​.ಗಾಳಿಮಠ, ಎಂ.ವೈ. ಯಮನೂರ, ಅಭೀಷೇಕ ಜಹಗೀರದಾರ, ಮಂಜುಳಾ ಬಿ.ಎಸ್​., ಶಿಕ್ಷಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net