ಮಾನ ಮರ್ಯಾದೆ ಬಿಟ್ಟು ರಾಜಕಾರಣಕ್ಕೆ ಬರಬೇಕು, ದಮ್ಮ ಧೈರ್ಯ ಇರಬೇಕು

IMG_20250627_225649.jpg
Published on

ಚಿಕ್ಕಬಳ್ಳಾಪುರ:ಮಾನ ಮರ್ಯಾದೆ ಬಿಟ್ಟು, ದಮ್ಮು, ಧೈರ್ಯದಿಂದ ರಾಜಕಾರಣಕ್ಕೆ ಬರಬೇಕು. ಇಲ್ಲಿ ಬೈದರೆ ಬೈಯಿಸಿಕೊಳ್ಳಬೇಕು. ಇದಾಗದಿದ್ದಲ್ಲಿ ಮನೆಯಲ್ಲಿ ತೆಪ್ಪಗೆ ಇರಬೇಕು ಎಂದು ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜಕಾರಣವು ಮೊಹಬತ್, ಇಷ್ಕ್, ಪ್ಯಾರ್ ಅಲ್ಲ. ಇಲ್ಲಿ ಹೊಗಳಿ ಮುದ್ದಾಡುವುದಿಲ್ಲ. ನಿರಂತರವಾಗಿ ಬೈಗುಳ ತಿನ್ನಬೇಕು. ಹಿಂದೆ ಒಂದು ಕಾಲ ಇತ್ತು. ಆದರೆ, ಇದು ಬದಲಾಗಿದೆ. ನಮ್ಮ ತಂದೆಗೆ ನಟ ರಾಜ್ಕುಮಾರ್ ಇಷ್ಟ ಆಗುತ್ತಿದ್ದರು. ನನಗೆ ನಟ ಶಿವರಾಜ್ಕುಮಾರ್ ಇಷ್ಟ. ಆಯಾ ಕಾಲಕ್ಕೆ ತಕ್ಕಂತೆ ಇಷ್ಟಪಡೋದು, ಬದಲಾವಣೆಗಳಾಗುವುದು ಸಹಜ ಎಂದಿದ್ದಾರೆ.
ಇಲ್ಲಿ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ನನ್ನನ್ನು ಟಾರ್ಗೆಟ್ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಇದ್ದು ಅಗತ್ಯವಿರುವುದನ್ನು ಮಾಡುತ್ತೇನೆ ಎಂದು ಸ್ವಪಕ್ಷೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

*ಅವರೇ ಬರಲಿ, ಆಹ್ವಾನ ನೀಡಲ್ಲ
ಜನರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ನಮ್ಮ ಊರು ನಮ್ಮ ಶಾಸಕ ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸುವುದಿಲ್ಲ. ಬಡವರ ಪರ ಕಾಳಜಿ ಉಳ್ಳವರು ಬರುತ್ತಾರೆ. ಅದರಂತೆ ಪಕ್ಷದ ಎಲ್ಲರೂ ಬರಲಿ, ಅಹವಾಲುಗಳನ್ನು ಜತೆಯಾಗಿ ಬಗೆಹರಿಸೋಣ, ಆದರೆ, ದೂರವಿದ್ದು ಬಾರದಿದ್ದಲ್ಲಿ ಪ್ರಿಯತಮೆಯನ್ನೇ ಮರೆಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾರೂ ಬೇಕಾದರೂ ಗ್ರಹಿಸಿಕೊಳ್ಳಲಿ ಎಂದು ಶಾಸಕರು ವ್ಯಂಗ್ಯವಾಡಿದರು.  ಸ್ವಪಯರು ವರಿಷ್ಠರಿಗೆ ದೂರು ನೀಡಿರುವ ವಿಚಾರ ಗೊತ್ತಿಲ್ಲ. ಬಿಜೆಪಿಯಲ್ಲಿದ್ದುಕೊಂಡು ಪತ್ರ ಸಲ್ಲಿಸಿರಬಹುದು. ಯಾರೇ ಆಗಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಮುಲಾಜಿಲ್ಲದೇ ಪಕ್ಷದಿಂದ ಕಿತ್ತು ಹಾಕಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net