

ಬಾಗಲಕೋಟೆ: ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಕಿರಾಣಿ, ಒಳ್ಳೆ ಎಣ್ಣೆ ವರ್ತಕನಾಗಿದ್ದ ವೃದ್ಧ(75)ರೊಬ್ಬರು ಶುಕ್ರವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇವರು ಮಾರ್ಚ್ 31ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ದ ಯಾವುದೇ ವಿದೇಶ,ರಾಜ್ಯ,ಪರರಾಜ್ಯ ಪರ ಜಿಲ್ಲೆಗೂ ಪ್ರವಾಸ ಮಾಡಿರಲಿಲ್ಲ. ವೃದ್ದನ ಮಗ, ಮಗಳು ಹತ್ತು ದಿನದ ಹಿಂದೆ ಬೆಂಗಳೂರಿನಿಂದ ಬಂದಿದ್ದರು. ಮಗ, ಮಗಳು ಕುಟುಂಬ ಇನ್ನೊಬ್ಬರ ವರದಿ ನೆಗೆಟಿವ್ ಎಂದು ಕೆಲವೇ ಗಂಟೆ ಹಿಂದೆ ಬಂದಿತ್ತು. ಈ ಬೆಳವಣಿಗೆ ಆತಂಕ ಸೃಷ್ಟಿಸಿದೆ.
COVID19 ಸೋಂಕಿಗೆ ಮೊದಲ ಬಲಿ ಕಲಬರುಗಿಯಲ್ಲಾಗಿತ್ತು. ಆ ವ್ಯಕ್ತಿ ಸೌದಿಗೆ ಹೋಗಿ ಹಿಂತಿರುಗಿ ಬಂದಿದ್ದರು. ಇದಾಗಿ, ಎರಡನೇ ಬಲಿ ಚಿಕ್ಕಬಳ್ಳಾಪುರ, ಮೂರನೇ ಸಾವಿನ ಪ್ರಕರಣ ತುಮಕೂರಿನಿಂದ ವರದಿಯಾಗಿತ್ತು. ರಾಜ್ಯದಲ್ಲಿ ನಿನ್ನೆ ಸಂಜೆವರೆಗೆ 128 ಜನರಿಗೆ ಸೋಂಕು ಪಾಸಿಟಿವ್ ಇರುವುದು ಧೃಡಪಟ್ಟಿದೆ.