ಚಾಮರಾಜನಗರ ಕಲ್ಲು ಗಣಿ ಕುಸಿತ ಪ್ರಕರಣ, ಮತ್ತೊಬ್ಬನ ಮರಣ; ಇಂದು ಇನ್ನೊಂದು ಶವ ಹೊರಕ್ಕೆ...

Chamarajanagar
Published on

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿಯಲ್ಲಿ ಶುಕ್ರವಾರ ಬಂಡೆ ಕುಸಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಸಾವಿಗೀಡಾಗಿದ್ದು, ಇದುವರೆಗೆ ಇಬ್ಬರ ಶವ ಹೊರತೆಗೆದಂತಾಗಿದೆ.

ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಕೇರಳ ಮೂಲದ ಉದ್ಯಮಿ ಹಕೀಮ್​ ಎಂಬಾತ ಗುತ್ತಿಗೆ ಪಡೆದು ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಗಣಿಗಾರಿಕೆ ವೇಳೆ ಬಂಡೆಯೊಂದು ಜೆಸಿಬಿ ಮತ್ತು ಟಿಪ್ಪರ್​ ಮೇಲೆ ಬಿದ್ದು ದುರಂತ ಸಂಭವಿಸಿದೆ ಎನ್ನಲಾಗಿದೆ.

ಬಂಡೆಯಡಿ ಸಿಲುಕಿಕೊಂಡವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನಿನ್ನೆ ಅಜಿಮುಲ್ಲಾ ಎಂಬಾತನ ಶವ ಹೊರತೆಗೆಯಲಾಗಿತ್ತು. ಮುಂದುವರಿದ ಕಾರ್ಯಾಚರಣೆಯಲ್ಲಿ ಇಂದು ಮಿರಾಜ್ ಎಂಬ ಇನ್ನೊಬ್ಬನ ಶವ ಹೊರ ತೆಗೆಯಲಾಗಿದೆ. ಒಟ್ಟು ಮೂವರು ಬಂಡೆಯಡಿ ಸಿಲುಕಿದ್ದರು ಎನ್ನಲಾಗಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net