ಅಂಗಡಿಗೊಂದು ಮಾವಿನ ಸಸಿ ವಿತರಣೆ, ಎಪಿಎಂಸಿಯಲ್ಲಿ ಹೊಸ ಯೋಜನೆಗೆ ಚಾಲನೆ

IMG_20231202_212518_378.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂದಲ್ಲಿ ಶುಕ್ರವಾರ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಗ್ರೀನ್ ಕರ್ನಾಟಕ ಅಸೋಸಿಯೇಶನ್ ಸಹಯೋಗದಲ್ಲಿ ಎಪಿಎಂಸಿ ಆವರಣದ ಅಂಗಡಿಕಾರರಿಗೆ ಮಾವಿನ ಸಸಿ ನೀಡುವುದು, ಈ ಮೂಲಕ ಪರಿಸರ ಕಾಳಜಿ ಹಾಗೂ ಹಬ್ಬ ಹರಿದಿನಗಳಲ್ಲಿ ತಳಿರು ತಾವೇ ಬೆಳೆದುಕೊಳ್ಳಲು ಪ್ರೇರಣೆ ನೀಡುವುದು ಇದರ ಉದ್ದೇಶವಾಗಿತ್ತು.

'ಅಂಗಡಿಗೊಂದು ಮಾವಿನ ಸಸಿ' ಹೆಸರಿನ ಯೋಜನೆಯಡಿ ಸುಮಾರು 300 ಅಂಗಡಿಕಾರರಿಗೆ ಸಸಿ ವಿತರಿಸಲಾಯಿತು. ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಮಾವಿನ ಮರ ಬೆಳೆಸಲು ಅನುಕೂಲವಾಗುವಂತೆ ಗ್ರೀನ್ ಕರ್ನಾಟಕ ಅಸೋಸಿಯೇಶನ್ ವತಿಯಿಂದ ಸಸಿಗಳ ವ್ಯವಸ್ಥೆ ಮಾಡಲಾಗಿತ್ತು.

ಹೊಸ ಯೋಜನೆ ಜಾರಿಗೆ ತಂದ ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ ಅವರನ್ನು ವ್ಯಾಪಾರಸ್ಥರ ಸಂದ ಅಧ್ಯ ರಾಜಕಿರಣ ಮೆಣಸಿನಕಾಯಿ ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.

ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ಇದ್ದರೆ ಮಾತ್ರ ಮಳೆ&ಬೆಳೆ ಉತ್ತಮವಾಗಿ ಜೀವ ಸಂಕುಲವು ಸಮೃದ್ಧಿಯಿಂದ ಇರಲು ಸಾಧ್ಯವಾಗುವುದೆಂದು ರಾಜಕಿರಣ ಹೇಳಿದರು.

ಸಂಘದ ಉಪಾಧ್ಯಕ್ಷ ಅನೀಲ ಓಸ್ತವಾಲ, ಗೌರವ ಕಾರ್ಯದಶಿರ್ ಅಶೋಕ ಬಾಳಿಕಾಯಿ, ಮಾಜಿ ಅಧ್ಯ ಗಂಗನಗೌಡ ಪಾಟೀಲ, ಸದಸ್ಯರಾದ ಶಿವಯೋಗಿ ಹೊಸಕಟ್ಟಿ, ಈಶ್ವರಪ್ಪ ಹೆಬಸೂರ, ವಿನೋದ ತಲ್ಲೂರ, ಶಿವನಗೌಡ ಪಾಟೀಲ, ನಾರಾಯಣ ಭಂಡಾರಕರ, ರುದ್ರಪ್ಪ ಬೆಟಗೇರಿ, ಆಹಾರಧಾನ್ಯ ವರ್ತಕರ ಸಂದ ಅಧ್ಯ ಮಲ್ಲಿಕಾರ್ಜುನ ಬೋರಟ್ಟಿ, ಉಪಾಧ್ಯ ಗಣೇಶ ಕಟಾರೆ, ಕಾರ್ಯದಶಿರ್ ಅರ್ಜುನ ಅಗ್ರವಾಲ, ಶಿವಾನಂದ ಸಣ್ಣಕ್ಕಿ, ಸಿದ್ದಲಿಂಗೇಶ ಮಮದಾಪುರ, ಕಿಶೋರ ಪಟೇಲ, ಪ್ರಕಾಶ ಸಾಂಬ್ರಾಣಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net