

ಕೋಲಾರ: ಒಂದೇ ಮರದಲ್ಲಿ ಎರಡು ಶವಗಳು ನೇತಾಡುತ್ತಿದ್ದ ದೃಶ್ಯವೊಂದು ಇಂದು ಕಂಡುಬಂದಿದ್ದು, ಸುತ್ತಮುತ್ತಲ ಜನರು ಒಮ್ಮೆ ದಿಗ್ಭ್ರಮೆಗೆ ಒಳಗಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಯಲವಳ್ಳಿ ಗ್ರಾಮದ ಹೊರವಲಯದಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂದಿದೆ. ಒಬ್ಬ ಯುವಕ ಹಾಗೂ ಇನ್ನೊಬ್ಬಳು ಅಪ್ರಾಪ್ತ ವಯಸ್ಸಿನವಳು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಗಂಗಾಧರ್ ಹಾಗೂ ಲಿಖಿತ ಎಂಬ ಗುರುತು ಪತ್ತೆಯಾಗಿದೆ. ಆದರೆ ಇಬ್ಬರ ನಡುವಿನ ಸಂಬಂಧ, ಆತ್ಮಹತ್ಯೆಗೆ ನಿಖರ ಕಾರಣ ಕುರಿತು ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.