ಒಂದು ಲಕ್ಷ ಜನರಿಗೆ ಹೆದರಿ ಹಲ್ಲೆ

12 KOTTUR 04
ಕೊಟ್ಟೂರಿನಲ್ಲಿ ಪಂಚಮಸಾಲಿ ಸಮಾಜದಿಂದ ಗುರುವಾರ ಪ್ರತಿಭಟನೆ ನಡೆಯಿತು. ಎಚ್.ಕೆ. ಗುರುಬಸವರಾಜ್, ಪಂಪಾಪತಿ ಅಂಗಡಿ, ಶೆಟ್ಟಿ ತಿಂದಪ್ಪ, ಚಾಪಿ ಚಂದ್ರಪ್ಪ, ರಾಂಪುರ ವಿವೇಕಾನಂದ, ಶಿವಪ್ರಕಾಶ, ಅಶೋಕ್ ಇಂಜಿನಿಯರ್ ಇತರರಿದ್ದರು.
Published on

ಕೊಟ್ಟೂರು: ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಖಂಡಿಸಿ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.

ಸಮಾಜದ ಪ್ರಮುಖರಾದ ಎಚ್.ಕೆ. ಗುರುಬಸವರಾಜ್, ಪಂಪಾಪತಿ ಅಂಗಡಿ, ಶೆಟ್ಟಿ ತಿಂದಪ್ಪ ಮಾತನಾಡಿ, ಪಂಚಮಸಾಲಿ ಸಮುದಾಯ ಹೋರಾಟದಿಂದಲೇ ಮುಂಚೂಣಿಗೆ ಬಂದಿದೆ. ಹೋರಾಟ ಎಂಬುಂದು ನಮ್ಮ ರಕ್ತದ ಕಣಕಣದಲ್ಲಿದೆ.

ಕೇವಲ ಒಂದು ಲಕ್ಷ ಪಂಚಮಸಾಲಿಗಳಿಗೆ ಹೆದರಿ ಲಾಠಿ ಚಾರ್ಜ್ ಮಾಡಿದ್ದೀರಿ. 25 ಲಕ್ಷ ಜನರು ಬೆಂಗಳೂರಿಗೆ ನುಗ್ಗಿ ಮೀಸಲಾತಿ ಹಕ್ಕು ಪಡೆಯುತ್ತೇವೆ ಎಂದು ಎಚ್ಚರಿಸಿದ ಅವರು, ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದನ್ನು ಬಂಡವಾಳ ಮಾಡಿಕೊಂಡು ಹೀಗೆ ಲಾಠಿ ಚಾರ್ಜ್ ಮಾಡಿದ್ದಾರೆ. ನಾವು ಒಂದಗೂಡಿ ಹೋರಾಟ ಮಾಡಿದರೆ ಸಮಾಜಕ್ಕೆ ಮೀಸಲಾತಿ ಸಿಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಇದಕ್ಕೂ ಮುನ್ನ ಕಿತ್ತೂರು ರಾಣಿ ಸರ್ಕಲ್‌ನಿಂದ ಉಜ್ಜಿನಿ ಸರ್ಕಲ್, ಕೊಟ್ಟೂರೇಶ್ವರ ದೇವಾಲಯ, ಬಸ್ ನಿಲ್ದಾಣದ ಮೂಲಕ ಮರಿಕೊಟ್ಟೂರೇಶ್ವರ ದೇವಾಲಯದವರೆಗೆ ರ‌್ಯಾಲಿ ನಡೆಸಲಾಯಿತು. ತಹಸೀಲ್ದಾರ್ ಜಿ.ಕೆ. ಅಮರೇಶಗೆ ಮನವಿ ಸಲ್ಲಿಸಲಾಯಿತು.

ಪ್ರಮುಖರಾದ ಚಾಪಿ ಚಂದ್ರಪ್ಪ, ರಾಂಪುರ ವಿವೇಕಾನಂದ, ಶಿವಪ್ರಕಾಶ, ಅಶೋಕ್ ಇಂಜಿನಿಯರ್, ಭರಮನ ಗೌಡ, ಬಸಾಪುರ ಪಂಪಾಪತಿ, ಚಪ್ಪರದಹಳ್ಳಿ ಕೊಟ್ರೇಶಪ್ಪ, ಗೋಪಿ, ಬಸವರಾಜ್ ಕೋನಾಪುರ, ಮರಬದ ಕೊಟ್ರೇಶ, ವೀಣಾ ವಿವೇಕಾನಂದ, ಉಮಾದೇವಿ, ಪ್ರೇಮಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net