

ಶನಿವಾರಸಂತೆ: ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಮೀಪದ ಕಣಿವೆಬಸವನಹಳ್ಳಿ ಗ್ರಾಮದ ಸಮೂದಾಯ ಭವನದಲ್ಲಿ ಸೋಮವಾರ ರಾತ್ರಿ ಗ್ರಾಮಸ್ಥರೆಲ್ಲರೂ ಸೇರಿ 101 ಹಣತೆಯನ್ನು ಬೆಳಗಿಸಿದರು.
ಮಹಿಳೆಯರು, ಮಕ್ಕಳು ಗ್ರಾಮಸ್ಥರು ಸೇರಿ ಸಾಮೂಹಿಕವಾಗಿ ಶ್ರೀರಾಮನಾಮ ಜಪ ಮಾಡಿದರು. ಕಾರ್ಯಕ್ರಮದಲ್ಲಿ 150 ಕ್ಕಿಂತ ಹೆಚ್ಚಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಈ ಸಂದರ್ಭ ಶಿಕ್ಷಕ ಅನಿಲ್ ಅವರು ಶ್ರೀರಾಮ ಮಂದಿರ ಕುರಿತು ಉಪನ್ಯಾಸ ನೀಡಿದರು.
ಸ್ಥಳೀಯ ಮುಖಂಡ ಕೆ.ಬಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಆಲೂರುಸಿದ್ದಾಪುರ ಗ್ರಾಪಂ ಸದಸ್ಯ ಪಿ.ಎನ್.ಗಂಗಾಧರ್, ಕಾಫಿ ಬೆಳೆಗಾರರಾದ ಕೊಮಾರಪ್ಪ, ಎಸ್.ಬಿ.ಸುಪ್ರೀತ್, ಮಾಲಂಬಿ ಕನ್ನಂಬಾಡಿ ಅಮ್ಮನವರ ದೇವಸ್ಥಾನ ಸಮಿತಿ ಅಧ್ಯಕ್ಷ ಈರಪ್ಪ, ಅರ್ಚಕ ಬಾಲನ್ ಮುಂತಾದವರು ಇದ್ದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.