Video | ಯಾರಿವನು?; ಹಾಡಹಗಲೇ ಮಚ್ಚು ಬೀಸಿದ, ಇದ್ದವರೆಲ್ಲರನ್ನೂ ಬೆಚ್ಚಿ ಬೀಳಿಸಿದ..!

Untitled-1
Published on

ಬೆಂಗಳೂರು: ಸುರಿಯುವ ಮಳೆಯಲ್ಲೂ ಓಡಾಡಿದರೆ ನೆನೆಯಬೇಕಾಗುತ್ತದೆ ಎಂದು ಒಂದಷ್ಟು ಜನ ಸಾರ್ವಜನಿಕರು ರಸ್ತೆ ಪಕ್ಕದ ಅಂಗಡಿಯೊಂದರ ಬಳಿ ನಿಂತಿದ್ದರು. ಆದರೆ ಅವರು ಇನ್ನೊಂದಷ್ಟು ದಿನ 'ನೆನೆಯುತ್ತಲೇ' ಇರುವಂಥ ಘಟನೆಯೊಂದು ನಡೆದುಹೋಗಿದೆ.

ಆತಂಕದ ವಿಷಯ ಎಂದರೆ, ಇಂಥದ್ದೊಂದು ಭಯಾನಕ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನ ಹೆಣ್ಣೂರು ಬಳಿಯ ಕಾಚರಕನಹಳ್ಳಿಯಲ್ಲಿ, ಅದರಲ್ಲೂ ಹಾಡಹಗಲೇ ಜನಸಂದಣಿ ಇರುವಲ್ಲೇ ನಡೆದಿದೆ.

ಮಳೆ ಬರುತ್ತಿದೆ ಎಂದು ರಸ್ತೆ ಪಕ್ಕದ ಅಂಗಡಿ ಬಳಿ ಒಂದಷ್ಟು ಜನರು ನಿಂತಿದ್ದರು. ಅದೇ ವೇಳೆಗೆ ಯುವಕನೊಬ್ಬ ಅಲ್ಲಿಗೆ ಬಂದಿದ್ದು, ಕೆಲವೇ ಕ್ಷಣಗಳಲ್ಲಿ ಉಡುಪಿನೊಳಗೆ ಮರೆಯಾಗಿಟ್ಟುಕೊಂಡಿದ್ದ ಮಚ್ಚನ್ನು ಏಕಾಏಕಿ ಹೊರಕ್ಕೆ ತೆಗೆದು ಬೀಸಿದ್ದಾನೆ. ಆಗ ಅಲ್ಲಿದ್ದ ಸಾರ್ವಜನಿಕರೆಲ್ಲ ಬೆಚ್ಚಿಬಿದ್ದಿದ್ದು, ತಕ್ಷಣ ಅಲ್ಲಿಂದ ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ.

ಬಳಿಕ ಆತ ಮಚ್ಚು ತೋರಿಸಿ ಅಂಗಡಿಯವನಿಗೆ ಎಚ್ಚರಿಕೆ ನೀಡುವಂತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್​ ಆಗಲಾರಂಭಿಸಿದೆ. ವಿಡಿಯೋ ತುಣುಕು ಆಧರಿಸಿ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net