ಓರ್ವ ಗಾರ್ಡ್‌ನಿಂದ 150 ಮನೆಗಳ ಮೇಲ್ವಿಚಾರಣೆ

kota (1)
Published on

ಬೈಂದೂರು: ರಾಜ್ಯ ಗೃಹ ಇಲಾಖೆ ನಿರ್ದೇಶನದಂತೆ ಪ್ರತಿ ಮನೆ ಮನೆಗಳಿಗೂ ಪೊಲೀಸ್ ಸುರಕ್ಷತೆ ತಲುಪಿಸಲು ಹಲವು ಯೋಜನೆಗಳನ್ನು ಜಿಲ್ಲೆಯಲ್ಲಿ ಅಳವಡಿಸಲಾಗಿದೆ. ದೃಷ್ಟಿ ಯೋಜನೆ ಮೂಲಕ ನೇಮಿಸಲಾದ ಒಬ್ಬ ಗಾರ್ಡ್‌ಗೆ 50ರಿಂದ 150 ಮನೆಗಳ ಮೇಲ್ವಿಚಾರಣೆ ಜವಾಬ್ದಾರಿ ನೀಡಲಾಗುತ್ತದೆ. ಪೊಲೀಸ್ ತಂಡ ಅವರಿಂದ ವಾಹಿತಿ ಪಡೆಯುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.

ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಬೈಂದೂರು ಆರಕ್ಷಕ ಠಾಣೆ ವತಿಯಿಂದ ನಡೆದ ದೃಷ್ಟಿ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ವಾತನಾಡಿ, ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಜನಸ್ನೇಹಿ ಯೋಜನೆಗಳಿಂದ ಅಪರಾಧ ಸಂಖ್ಯೆ ಇಳಿಮುಖವಾಗುತ್ತದೆ. ಅಪರಾಧ ಪ್ರಕರಣ ತಡೆಗಟ್ಟಲು ಆನುಕೂಲವಾಗುತ್ತದೆ ಎಂದರು.

ಬೈಂದೂರು ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ, ನಾಗರಾಜ ಶೆಟ್ಟಿ, ಸದಾಶಿವ ಡಿ.ಪಡುವರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಜಂಬೋ ಸ್ಟಾರ್ ಸೆಕ್ಯೂರಿಟಿ ವಾನವ ಸಂಪನ್ಮೂಲ ಅಧಿಕಾರಿ ಕಾವ್ಯಾ ಎಚ್.ಆರ್. ಉಪಸ್ಥಿತರಿದ್ದರು.

ಕುಂದಾಪುರ ಪೊಲೀಸ್ ಉಪಾಧೀಕ್ಷಕ ಎಚ್.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಂದೂರು ಠಾಣಾಧಿಕಾರಿ ತಿಮ್ಮೇಶ ಬಿ.ಎನ್. ಸ್ವಾಗತಿಸಿದರು. ಪಿಎಸ್‌ಐ ನವೀನ್ ಪಿ. ಬೋರ್ಕರ್ ವಂದಿಸಿದರು. ಅರುಣ್‌ಕುವಾರ್ ಶಿರೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net