

ಅಥಣಿ ಗ್ರಾಮೀಣ: ಎರಡು ಬೈಕ್ ನಡುವೆ ನಡೆದ ಅಪಘಾತದಲ್ಲಿ ತಾಲೂಕಿನ ಐಗಳಿ ಗ್ರಾಮದ ಮಹಾದೇವ ಸಂಗನಗೌಡ ಪಾಟೀಲ (45) ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿರುವ ಟನೆ ಅಥಣಿ ತಾಲೂಕಿನ ಕೊಕಟನೂರ ಕ್ರಾಸ್ ಬಳಿಯ ಅಥಣಿ&ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ರಾತ್ರಿ ನಡೆದಿದೆ.
ಜಂಬಗಿ ಗ್ರಾಮದ ಮಹಾಂತೇಶ ಮಾಳಿ (38), ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಅನಿಲ ಕಾಳೆಲಿ (38), ಐಗಳಿ ಗ್ರಾಮದ ಮಲ್ಲಿಕಾರ್ಜುನ ಪಾಟೀಲ (42) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಐಗಳಿ ಪಿಎಸ್ಐ ಚಂದ್ರಶೇಖರ ಸಾಗನೂರ, ತನಿಖಾ ಸಹಾಯಕರಾದ ಪಿ.ಸಿ ಕಂಟಿಗೊಂಡ, ಪ್ರಕಾಶ ಕುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.