ಕಾರು ಅಪಘಾತದಲ್ಲಿ ಒಬ್ಬ ಸಾವು

CAR
Published on

ಅಂಕೋಲಾ: ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಸರಳೇಬೈಲ್‌ನಲ್ಲಿ ಗುರುವಾರ ನಡೆದಿದೆ.

ತೆಲಂಗಾಣ ರಾಜ್ಯದ ತಿರುಮಲಗಿರಿಯ ನಿವಾಸಿ ಬಿ. ರೋಹಿತ ಯಾದವ (32) ಮೃತಪಟ್ಟ ವ್ಯಕ್ತಿ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಈ ಅವಘಡ ನಡೆದಿದೆ. ಆಂಧ್ರಪ್ರದೇಶದ ಮುಡುಪು ನಿಶ್ಯಾಂತ ಆದಿತ್ಯಾ, ಬಳ್ಳಾರಿಯ ಸಾಯಿ ಪ್ರಸಾದ ಮತ್ತು ಉಪೇಂದ್ರ ರಾಘವ ರೆಡ್ಡಿ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನಾ ಸ್ಥಳಕ್ಕೆ ಪಿಐ ಸಂತೋಷ ಶೆಟ್ಟಿ, ಹೆದ್ದಾರಿ ಗಸ್ತು ವಾಹನದ ಎಎಸ್‌ಐ ಚಂದ್ರಕಾಂತ ನಾಯ್ಕ ಭೇಟಿ ನೀಡಿದರು. ಕಾರು ಚಾಲಕ ನಲಮ್ ಕೌಶಿಕ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net