ಬೈಕ್‌ಗಳ ಅಪಘಾತದಲ್ಲಿ ಓರ್ವ ಸಾವು

ald acci
ಅಪಘಾತವಾದ ಬೈಕ್.
Published on

ಆಲ್ದೂರು: ಪಟ್ಟಣ ಸಮೀಪದ ಚಿಕ್ಕಮಗಳೂರು ರಸ್ತೆಯಲ್ಲಿ ಸೋಮವಾರ ಎರಡು ಬೈಕ್‌ಗಳು ಡಿಕ್ಕಿಯಾಗಿ ಓರ್ವ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಸವಾರನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಕಂಚಿನಕಲ್‌ದುರ್ಗ ಗ್ರಾಮದ ಸತ್ಯರಾಜ್(37) ಮೃತ ದುರ್ದೈವಿ. ಗಾಳಿಗಂಡಿ ಇಬ್ರಾಹಿಂ ಗಾಯಗೊಂಡವರು. ಅಪಘಾತದಲ್ಲಿ ಸತ್ಯರಾಜ್‌ಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಇಬ್ರಾಹಿಂ ಕಾಲಿಗೆ ಪೆಟ್ಟು ಬಿದ್ದಿದ್ದು ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net