ಓರ್ವ ಸಾವು, 17 ಜನರಿಗೆ ಗಂಭೀರ ಗಾಯ

One death, 17 seriously injured
ತಾಳಿಕೋಟೆ ತಾಲೂಕಿನ ಶಳ್ಳಗಿ ಗ್ರಾಮದ ಬಳಿ ಕ್ರಷರ್-ಕಾರು ನಡುವೆ ಸಂಭವಿಸಿದ ಅಪಘಾತದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು.
Published on

ತಾಳಿಕೋಟೆ: ಶಹಾಪುರ ತಾಲೂಕಿನ ಪರಸನಳ್ಳಿ ಗ್ರಾಮದಿಂದ ಪಟ್ಟಣದಲ್ಲಿ ನಡೆಯುತ್ತಿದ್ದ ಮದುವೆಗೆ ಬಂದಿದ್ದ ಕ್ರಷರ್ ವಾಹನ ಹಾಗೂ ಕಾರು ನಡುವೆ ಬುಧವಾರ ಸಂಜೆ ತಾಲೂಕಿನ ಶಳ್ಳಗಿ ಗ್ರಾಮದ ಕ್ರಾಸ್ ಹತ್ತಿರ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, 17 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತನನ್ನು ಸಂಗಮೇಶ ಗುರಣ್ಣ ಹುಲಸೂರ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ.

ಕ್ರಷರ್ ವಾಹನದಲ್ಲಿ 17 ಜನರಿದ್ದರು. ಇವರೆಲ್ಲವೂ ಬುಧವಾರ ಬೆಳಗ್ಗೆ ಪಟ್ಟಣದಲ್ಲಿ ಮದುವೆ ಮುಗಿಸಿಕೊಂಡು ಮರಳಿ ಪರಸನಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್. ಭಂಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net