ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ಎಚ್ಎಎಲ್ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸಾಗರನಹಳ್ಳಿ ಗೇಟ್ ಬಳಿ ಎನ್ಎಚ್ 206ರಲ್ಲಿ ತಿಪಟೂರು ಕಡೆಯಿಂದ ತುಮಕೂರಿನತ್ತ ಕ್ಯಾಟಂರ್ಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ವರುಣ್ ಪಾಟೀಲ್(23) ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೋರ್ವ ದಿನೇಶ್ (38) ಗಾಯಗೊಂಡಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಹೋಂಡಾ ಅಮೇಜ್, ಇನ್ನೋವಾ ಕಾರುಗಳು ಒಂದಕ್ಕೊಂಡು ಡಿಕ್ಕಿ ಹೊಡೆದುಕೊಂಡಿವೆ. ಅದೃಷ್ಟವಶಾತ್ ಯಾರೊಬ್ಬರು ಗಾಯಗೊಂಡಿಲ್ಲ. ವರುಣ್, ದಿನೇಶ್ ಡಾಬಸಪೇಟೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದು ದೊಡ್ಡಗುಣಿಯವರು ಎನ್ನಲಾಗಿದೆ.
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.