

ರಾಣೆಬೆನ್ನೂರ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಓರ್ವ ಮೃತಪಟ್ಟ ಟನೆ ತಾಲೂಕಿನ ತಾಲೂಕಿನ ಗುಡ್ಡದಆನ್ವೇರಿ ಗ್ರಾಮದ ಬಳಿ ಬಿಳಿಗಿರಿರಂಗನಬೆಟ್ಟ&ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಗ್ರಾಮದ ರಾಹುಲ ಗುಡ್ಡಪ್ಪ ಆನ್ವೇರಿ (25) ಮೃತ ಬೈಕ್ ಸವಾರ.
ಈತ ಗುಡ್ಡದ ಆನ್ವೇರಿ ಗ್ರಾಮದಿಂದ ಹೋಗುತ್ತಿದ್ದ ಸಮಯದಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಇದರಿಂದ ರಾಹುಲ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.