ಲಾರಿ, ಆಟೋ ಡಿಕ್ಕಿ ಓರ್ವ ಸಾವು

Published on

ಬಳ್ಳಾರಿ : ತಾಲೂಕಿನ ಹಗರಿ ಸೇತುವೆ ಬಳಿ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದಿದ್ದರಿಂದ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಮೀನಹಳ್ಳಿ ಗ್ರಾಮದ ನಿವಾಸಿ ಪವನ್ (25) ಮೃತ. ಮೀನಹಳ್ಳಿ ಗ್ರಾಮದಿಂದ ಬಳ್ಳಾರಿ ಕಡೆಗೆ ಹೋಗುವಾಗ ದುರ್ಘಟನೆ ನಡೆದಿದೆ. ಆಟೋದಲ್ಲಿನ ಆರು ಜನರಿಗೆ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಬಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತು ಪಿಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net