

ಶಿರಸಿ: ಗಾಳಿ ತುಂಬಿಸುತ್ತಿದ್ದ ವೇಳೆ ಟಯರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಹುಬ್ಬಳ್ಳಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬಾಳೆಹಳ್ಳಿ ಸಮೀಪದ ಶೃಂಗೇರಿಯ ಶಶಿಕುಮಾರ ಕೃಷ್ಣಪ್ಪ ಕೊಂಡೊಜಿ ಮೃತಪಟ್ಟಿದ್ದು, ಪಕ್ಕದಲ್ಲಿ ನಿಂತಿದ್ದ ಸಿದ್ದಪ್ಪ ಪುಟ್ಟಪ್ಪ ಕನ್ನೆಶ್ವರ ಗಂಭೀರ ಗಾಯಗೊಂಡಿದ್ದಾನೆ. ಹುಬ್ಬಳ್ಳಿ ರಸ್ತೆಯ ಮಹ್ಮದ ಅಸ್ಲಂ ಎಂಬುವರ ಪಂಕ್ಚರ್ ಅಂಗಡಿಯಲ್ಲಿ ಟ್ರಾೃಕ್ಟರ್‌ನ ಹಿಂದಿನ ಟಯರ್‌ಗೆ ಗಾಳಿ ತುಂಬಿಸುತ್ತಿದ್ದಾಗ ಸ್ಫೋಟಗೊಂಡಿದೆ. ಗಾಳಿ ಹಾಕುತ್ತಿದ್ದ ಶಶಿಕುಮಾರನಿಗೆ ಮತ್ತು ಆತನ ಪಕ್ಕದಲ್ಲಿದ್ದ ಸಿದ್ದಪ್ಪನಿಗೆ ಟಯರ್‌ನ ಡಿಸ್ಕ್ ಮತ್ತು ರಿಂಗ್ ಬಡಿದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಇಬ್ಬರನ್ನೂ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರತ್ನಾ ಕುರಿ ತನಿಖೆ ಕೈಗೊಂಡಿದ್ದಾರೆ.