ಬಳ್ಳಾರಿ ; ನಗರದ ಕೆಇಬಿ ವೃತ್ತದ ಬಳಿ ರಸ್ತೆ ದಾಟುವಾಗ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಾಲಕ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ನಿವಾಸಿ ಹನುಮಂತ ರೆಡ್ಡಿ (37) ಮೃತ. ಕೆಇಬಿ ವೃತ್ತದ ಬಳಿ ಸ್ಕೂಟರ್ ಚಾಲಕ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಪರಿಣಾಮ ಸ್ಕೂಟರ್ ಚಾಲಕ ಮೃತಪಟ್ಟಿದ್ದಾನೆ. ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.