

ಕೋಟ: ಐರೋಡಿ ಗ್ರಾಮ ಪಂಚಾಯಿತಿ ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಆಶ್ರಯದಲ್ಲಿ ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ ಹಂಗಾರಕಟ್ಟೆ ಬಾಳ್ಕುದ್ರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂದಲ್ಲಿ ಇತ್ತೀಚೆಗೆ ನಡೆಯಿತು.
ಒಕ್ಕೂಟ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಬಾಳ್ಕುದ್ರು ಬಿಲ್ಲವ ಸಂದ ಮಹಿಳಾ ಟಕ ಅಧ್ಯಕ್ಷೆ ಶಕುಂತಲಾ ವಾಸುದೇವ, ಬಾಳ್ಕುದ್ರು ಮಹಿಳಾ ಮಂಡಲ ಅಧ್ಯಕ್ಷೆ ರೇಖಾ ಪಿ.ಸುವರ್ಣ ಮಾತನಾಡಿದರು. ಸುವಾರು 38 ಬಗೆಯ ಖಾದ್ಯಗಳನ್ನು ಸದಸ್ಯರು ತಯಾರಿಸಿ ತಂದಿದ್ದರು. ಸಂಜೀವಿನಿ ಒಕ್ಕೂಟ ಪಶುಸಖಿ ಪ್ರೇಮಾ ಸ್ವಾಗತಿಸಿದರು. ಎಲ್ಸಿಆರ್ಪಿ ಇಂದಿರಾ ವಂದಿಸಿದರು. ಎಂಬಿಕೆ ಪುಷ್ಪಾ ಪ್ರಾಸ್ತಾವಿಸಿದರು. ಕೃಷಿ ಸಖಿ ಉಷಾ ಕುಲಾಲ್ ನಿರೂಪಿಸಿದರು. ಎಲ್ಸಿಆರ್ಪಿ ಸುಶ್ಮಿತಾ ಸಹಕರಿಸಿದರು.