ನಾಲೆಗೆ ಒಂದು ದಿನ ನೀರು ಹರಿಸಿ

lng mlc Sharngouda
ಶರಣಗೌಡ ಪಾಟೀಲ್ ಬಯ್ಯಪುರ
Published on

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬಲದಂಡೆ ನಾಲೆಗೆ ಒಂದು ದಿನದ ಮಟ್ಟಿಗೆ ನೀರು ಹರಿಸುವಂತೆ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಅವರು ಡಿಸಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ತಾಲೂಕಿನ ಬಲದಂಡೆ ಕಾಲುವೆ ಕೆಳಭಾಗದ ಹಳ್ಳಿಗಳಾದ ರೋಡಲಬಂಡಾ, ಚಿಕ್ಕಉಪ್ಪೇರಿ, ಯರಗುಂಟಿ, ಜಲದುರ್ಗ, ಸುಣಕಲ್, ಈಚನಾಳ, ಗುಂತಗೋಳ, ಗೋನವಾಟ್ಲ, ದೇವರಭೂಪುರ, ಗೌಡೂರು ಸೇರಿ ದೊಡ್ಡಿ, ತಾಂಡಾಗಳ ಜನ-ಜಾನುವಾರುಗಳು ಕುಡಿವ ನೀರಿನ ತೊಂದರೆ ಎದುರಿಸುತ್ತಿವೆ.

ಆದ್ದರಿಂದ ಬಲದಂಡೆ ಕಾಲುವೆಗೆ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಕುಡಿಯಲು ನೀರು ಹರಿಸುವಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net