ಒಂದೇ ದಿನ ನಾಲ್ವರ ಹಿತ್ತಲಿನಿಂದ 2.10 ಲಕ್ಷ ರೂ. ಮೌಲ್ಯದ ಗಂಧದ ಗಿಡ ಕಳ್ಳತನ

Crime Logo
Published on

ಬಂಕಾಪುರ: ಒಂದೇ ದಿನ 2.10 ಲಕ್ಷ ರೂ. ಮೌಲ್ಯದ 1.5 ಕ್ವಿಂಟಾಲ್ ತೂಕದ ನಾಲ್ವರ ಗಂಧದ ಗಿಡಗಳನ್ನು ಕಟಾವು ಮಾಡಿಕೊಂಡು ಹೋದ ಘಟನೆ ಪಟ್ಟಣದಲ್ಲಿ ಗುರುವಾರ ಸಂಭವಿಸಿದೆ.
ಪಟ್ಟಣದ ದೀಪಾ ಬಿ.ಎಂ., ಬ್ರಾಹ್ಮಣ ಓಣಿಯ ನಿವಾಸಿ ಭಗತಸಿಂಗ್ ವೆಂಕಟಸಿಂಗ್ ಮುಳಗುಂದ, ಅರಳೆಲೆಮಠ ಓಣಿಯ ರುದ್ರಮುನಿ ಬಂಕಪ್ಪ ಕುರಗೋಡಿ ಹಾಗೂ ವಳಗೇರಿ ಓಣಿಯ ಶೇಖಪ್ಪ ಬಸವಣ್ಣೆಪ್ಪ ವಳಗೇರಿ ಎಂಬುವರ ಗಿಡಗಳು ಕಳ್ಳತನ ಮಾಡಿರುವುದು.
ಇವರು ತಮ್ಮ ಮನೆಯ ಹಿಂಭಾಗದ ಜಾಗದಲ್ಲಿ ಗಂಧದ ಗಿಡಗಳನ್ನು ಬೆಳೆದಿದ್ದರು. ಯಾರೋ ಕಳ್ಳರು ರಾತ್ರೋ ರಾತ್ರಿ ಬಂದು ತಲಾ ಮೂವರ ಹಿತ್ತಲಿನಿಂದ 50 ಸಾವಿರ ರೂ. ಮೌಲ್ಯದ 25 ಕೆ.ಜಿ.ನಂತೆ ಒಟ್ಟು 75 ಕೆ.ಜಿ. ಹಾಗೂ ಭಗತಸಿಂಗ್ ಎಂಬುವರ ಹಿತ್ತಲಿನಿಂದ 60 ಸಾವಿರ ರೂ. ಮೌಲ್ಯದ 30 ಕೆ.ಜಿ. ತೂಕದ ಗಂಧದ ಗಿಡಗಳನ್ನು ಕಟಾವು ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net