ಒಂದು ಕೋಟಿ ರೂ. ತೆರಿಗೆ ಸಂಗ್ರಹ

msk pura
ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮುಖ್ಯಾಧಿಕಾರಿ ನರಸರಡ್ಡಿ
Published on

ಮಸ್ಕಿ: ಪ್ರಸಕ್ತ ವರ್ಷ ಪುರಸಭೆಗೆ ಒಂದು ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ದಾಖಲೆಯಾಗಿದೆ ಎಂದು ಮುಖ್ಯಾಧಿಕಾರಿ ನರಸರಡ್ಡಿ ಹಾಗೂ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ತಿಳಿಸಿದರು.

ಇಲ್ಲಿನ ಪುರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ತೆರಿಗೆ ಸಂಗ್ರಹವಾಗಿದೆ. ಪುರಸಭೆ ಕಂದಾಯ ಅಧಿಕಾರಿಗಳು, ಕರ ವಸೂಲಿಗಾರರಿಂದಾಗಿ ನಿರೀಕ್ಷೆ ಮೀರಿ ತೆರಿಗೆ ಸಂಗ್ರಹವಾಗಿದೆ ಎಂದರು.

23 ವಾರ್ಡ್‌ಗಳಲ್ಲಿ 40 ಸಾವಿರ ಜನಸಂಖ್ಯೆಯಿದ್ದು, 14 ಸಾವಿರಕ್ಕೂ ಹೆಚ್ಚು ಸ್ವತ್ತುಗಳಿವೆ. ಇನ್ನೂ ಅನೇಕರು ತೆರಿಗೆ ಕಟ್ಟಿಲ್ಲ. ಅಂತಹವರು ತ್ವರಿತವಾಗಿ ಪಾವತಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net