ಬಿಜೆಪಿಗೆ ಕಾಡುತ್ತಿದೆ ಸೋಲಿನ ಭೀತಿ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿಕೆ

VS Ugrappa
ಎಸ್.ವಿ.ಉಗ್ರಪ್ಪ, ಮಾಜಿ ಸಂಸದ.
Published on

ಬಳ್ಳಾರಿ: ಒಂದು ದೇಶ ಒಂದು ಚುನಾವಣೆ ಮಾಡುವುದು ಕಷ್ಟ. ಗ್ರಾಪಂಯಿಂದ ಲೋಕಸಭೆವರೆಗೆ ಏಕಕಾಲದಲ್ಲಿ ಚುನಾವಣೆ ಮಾಡಲು ಸಾಧ್ಯ ಇದೆಯೇ?, ಇದ್ದಿದ್ದರೆ ಇಲ್ಲಿವರೆಗೆ ಏಕೆ ವಿಳಂಬ ಮಾಡಿದರು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.


ನಗರದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇಷ್ಟು ವರ್ಷವಾದರೂ ಏಕೆ ಸುಮ್ಮನಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ 28 ಬಾರಿ ಅಲೆದರೂ ಬಿಜೆಪಿ ಪರ ಫಲಿತಾಂಶ ಸಿಗಲಿಲ್ಲ.

ತಮಿಳುನಾಡು, ಪಶ್ಚಿಮ ಬಂಗಾಳದಲ್ಲೂ ಸೋಲಾಯಿತು. ಕೆಲ ಕಡೆಗಳಲ್ಲಿ ಬೇರೆ ಪಕ್ಷಗಳ ಬೆಂಬಲದ ಮೇಲೆ ಅಧಿಕಾರ ನಡೆಸುತ್ತಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯನ್ನು ಐರನ್ ಲೆಗ್ ಎಂದು ಟೀಕಿಸಿದರು.


ಪೆಟ್ರೋಲ್, ಗ್ಯಾಸ್, ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಕ್ಕೆ ಬಿಜೆಪಿಗರು ಹತಾಶರಾಗಿದ್ದಾರೆ. ವಿಧಾನ ಸಭೆಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಇವರಿಂದ ಆಗುತ್ತಿಲ್ಲ ಎಂದರು.


ಸಂಸದ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆಗೆ ಒಂದು ವರ್ಷ ಆಗಿದೆ. ದೇಶದ ಸಮಸ್ಯೆ ಅರ್ಥ ಮಾಡಿಕೊಳ್ಳುವುದಕ್ಕೆ 3500 ಕಿಮೀಗೂ ಹೆಚ್ಚು ಪಾದಯಾತ್ರೆ ಮಾಡಲಾಗಿದೆ. ಆದರೆ ಬಿಜೆಪಿಗರು ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ.

ವಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ ಬಗ್ಗೆ ಬಿಜೆಪಿಗೆ ಹೆದರಿಕೆ ಶುರುವಾಗಿದೆ ಎಂದರು. ಮುಖಂಡರಾದ ಸಂಗನಕಲ್ಲು ವಿಜಯಕುಮಾರ್, ವೆಂಕಟೇಶ್ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net