ಒಂದು ದೇಶ ಒಂದು ಚುನಾವಣೆ ಪ್ರಜಾಪ್ರಭುತ್ವಕ್ಕೆ ಮಾರಕ

19-09-Shiva-3
ಒಂದು ದೇಶ ಒಂದು ಚುನಾವಣೆ ಜಾರಿಯನ್ನು ಖಂಡಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್‌ನಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ತಾಲೂಕು ಕಾರ್ಯದರ್ಶಿ ಹುಚ್ಚರೆಡ್ಡಿ, ಪದಾಕಾರಿಗಳಾದ ಜಿ.ಅಮರೇಶ, ಅಜೀಜ್ ಜಹಾಗೀರದಾರ್, ಜಿ.ಅಡವಿರಾವ್, ಸೈದ್ ಅಬ್ಬಾಸ್ ಅಲಿ, ಅಡಿವೆಪ್ಪ, ಆದೇಶ ನಗನೂರು, ಯಲ್ಲಪ್ಪ ಉಟಕನೂರು, ಮಲ್ಲಯ್ಯ ಕಟ್ಟಿಮನಿ ಇದ್ದರು.
Published on

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಒಂದು ದೇಶ ಒಂದು ಚುನಾವಣೆ ಮತ್ತು ಏಕರೂಪ ನಾಗರಿಕತೆಯನ್ನು ವಿರೋಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್‌ನಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಒಂದು ದೇಶ ಒಂದು ಚುನಾವಣೆಗೆ ಅವಕಾಶ ನೀಡಿದರೆ ದೇಶದ ಸಂಸದೀಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಕ್ಕೆ ಗಂಡಾಂತರ ಉಂಟಾಗಲಿದೆ. ಮುಖ್ಯವಾಗಿ ಭಾರತದ ಗಣತಂತ್ರ ವ್ಯವಸ್ಥೆ ಮಣ್ಣು ಪಾಲಾಗಲಿದ್ದು, ವಿವಿಧ ಧರ್ಮ, ಭಾಷೆ, ಸಂಸ್ಕೃತಿ ಹಾಗೂ ವೈವಿಧ್ಯತೆಗಳ ಆಚರಣೆಗಳನ್ನು ಗಡಿಪಾರು ಮಾಡುವ ದಿನಗಳು ಬರಲಿವೆ.
ಮುಂಬರುವ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಡ್, ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಲೋಕಸಭೆ ಚುನಾವಣೆಯೊಂದಿಗೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವ ಕುತಂತ್ರ ನಡೆಸುತ್ತಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿಯ ವಿಷಯ ಕಳೆದ ಚುನಾವಣೆಯ ಬಿಜೆಪಿಯ ಪ್ರಣಾಳಿಕೆಯಿದ್ದ ್ಯಾಸಿಸ್ಟ್ ಅಜೆಂಡಾವಾಗಿದೆ. ಇದು ಮುಸ್ಲಿಂ ಮಹಿಳೆಯರ ಹಿತದ ನೆಪದಲ್ಲಿ ಭಾರತದ ಬಹು ಸಂಖ್ಯಾತ ಹಿಂದುಳಿದ ವರ್ಗ, ಧಾರ್ಮಿಕ ಅಲ್ಪ ಸಂಖ್ಯಾತ, ಆದಿವಾಸಿ, ದಲಿತ ಸಮುದಾಯದವರಿಗೆ ಮಾರಕವಾಗಲಿದೆ.
ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಮತ್ತು ಒಂದು ದೇಶ ಒಂದು ಚುನಾವಣೆ ಜಾರಿಯನ್ನು ಕೈಬಿಡಬೇಕು. ಹಿಂದುತ್ವದ ಹೆಸರಿನಲ್ಲಿ ಸಮಾಜಘಾತುಕ ಕೆಲಸ ನಡೆಸುತ್ತಿರುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಹುಚ್ಚರೆಡ್ಡಿ, ಪದಾಕಾರಿಗಳಾದ ಜಿ.ಅಮರೇಶ, ಅಜೀಜ್ ಜಹಾಗೀರದಾರ್, ಜಿ.ಅಡವಿರಾವ್, ಸೈದ್ ಅಬ್ಬಾಸ್ ಅಲಿ, ಅಡಿವೆಪ್ಪ, ಆದೇಶ ನಗನೂರು, ಯಲ್ಲಪ್ಪ ಉಟಕನೂರು, ಮಲ್ಲಯ್ಯ ಕಟ್ಟಿಮನಿ, ನಿರಂಜನ್ ಕುಮಾರ, ಭಗತಸಿಂಗ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net